ವಿಶ್ವಸಂಸ್ಥೆ, ಆ.03 (DaijiworldNews/HR): ಭಾರತದ ಮೇಲೆ ಮ್ಯಾನ್ಮಾರ್ನಲ್ಲಿನ ಯಾವುದೋ ಅಸ್ಥಿರತೆಯೂ ನೇರ ಪರಿಣಾಮ ಬೀರುತ್ತದೆ. ಹಾಗಾಗಿ ಮ್ಯಾನ್ಮಾರ್ ಅನ್ನು ಮತ್ತಷ್ಟು ಅಸ್ಥಿರಗೊಳಿಸುವ ಅಂತರರಾಷ್ಟ್ರೀಯ ಸಮುದಾಯದ ಕ್ರಮವನ್ನು ಭಾರತ ಬೆಂಬಲಿಸುವುದಿಲ್ಲ" ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಆಗಸ್ಟ್ ತಿಂಗಳ ಅಧ್ಯಕ್ಷ, ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ಟಿ.ಎಸ್.ತಿರುಮೂರ್ತಿ ಅವರು ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, "ನಮಗೆ ಮ್ಯಾನ್ಮಾರ್ ಅತ್ಯಂತ ಪ್ರಮುಖ ನೆರೆರಾಷ್ಟ್ರವಾಗಿದ್ದು, ಮ್ಯಾನ್ಮಾರ್ಗೆ ಸಂಬಂಧಿತ ಬೆಳವಣಿಗೆಗಳು ಕೂಡ ನಮಗೆ ಮಹತ್ವದ್ದಾಗಿದೆ. ಮ್ಯಾನ್ಮಾರ್ನ ಪರಿಸ್ಥಿತಿಯು ಭಾರತದ ಮೇಲೆ ನೇರ ಪರಿಣಾಮ ಬೀರುತ್ತದೆ" ಎಂದರು.
ಇನ್ನು "ಮ್ಯಾನ್ಮಾರ್ ಕುರಿತಾಗಿ ಭಾರತದ ನಿಲುವು ಸ್ಪಷ್ಟ ಮತ್ತು ಸ್ಥಿರವಾಗಿದ್ದು, ಮ್ಯಾನ್ಮಾರ್ನಲ್ಲಿ ನಡೆದ ಹಿಂಸಾಚಾರವನ್ನು ನಾವು ಕೂಡ ಖಂಡಿಸುತ್ತೇವೆ. ಮ್ಯಾನ್ಮಾರ್ಗೆ ಬಂಧಿತ ನಾಯಕರನ್ನು ಬಿಡುಗಡೆ ಮಾಡುವಂತೆ ಭಾರತ ಒತ್ತಾಯಿಸಿದ್ದು, ಪ್ರಜಾಪ್ರಭುತ್ವಕ್ಕಾಗಿ ಕಾನೂನು ನಿಯಮಗಳಂತೆ ಕ್ರಮ ಕೈಗೊಳ್ಳುವಂತೆಯೂ ಮನವಿ ಮಾಡಿದೆ"ಎಂದು ಹೇಳಿದ್ದಾರೆ.