ವಾಷಿಂಗ್ಟನ್, ಆ 04 (DaijiworldNews/PY): "ಕೊರೊನಾ ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಭಾರತ ಹಾಗೂ ಇತರ ದೇಶಗಳಿಗೆ ಲಸಿಕೆ ಉತ್ಪಾದನೆಗಾಗಿ ಅಮೇರಿಕಾ ಸಹಾಯ ಮಾಡುತ್ತಿದೆ" ಎಂದು ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.
ಶ್ವೇತಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರಪಂಚಕ್ಕೆ ಹಲವಾರು ಶತಕೋಟಿ ಡೋಸ್ಗಳ ಅವಶ್ಯಕತೆ ಇದೆ. ಈ ಪೈಕಿ ಅಮೇರಿಕಾ 50 ಕೋಟಿ ಡೋಸ್ಗಳನ್ನು ನೀಡಲು ಬದ್ದವಾಗಿದೆ" ಎಂದು ತಿಳಿಸಿದ್ದಾರೆ.
"ನಾವು ಲಸಿಕೆಯ 50 ಕೋಟಿ ಡೋಸ್ ಲಸಿಕೆಗಿಂತ ಹೆಚ್ಚಿನದ್ದನ್ನು ಒದಗಿಸಲು ಯತ್ನಿಸುತ್ತಿರುವ ಕೊರೊನಾ ಲಸಿಕೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿರುವ ಭಾರತದಂತ ದೇಶಗಳಿಗೆ ಲಸಿಕೆ ಉತ್ಮಾದನೆಗೆ ನಾನು ನೆರವು ನೀಡುವುದನ್ನು ಮುಂದುವರಿಸುತ್ತೇವೆ" ಎಂದಿದ್ದಾರೆ.
"ನಾವು ಅವಶ್ಯಕವಿರುವ ದೇಶಗಳಿಗೆ ಕೊರೊನಾ ಲಸಿಕೆಯ ಡೋಸ್ಗಳನ್ನು ಉಚಿತವಾಗಿ ನೀಡಲಿದ್ದೇವೆ. ಲಸಿಕೆಗಳ ಸಂಗ್ರಹಗಾರನಾಗಲು ಅಮೇರಿಕಾ ಬದ್ದ. ಅಮೇರಿಕಾ, ಈ ಹಿಂದೆ ಎರಡನೇ ಮಹಾಯುದ್ದದ ಸಂದರ್ಭದಲ್ಲಿ ಪ್ರಜಾಪ್ರಭುತ್ವದ ರಕ್ಷಕನ ಪಾತ್ರ ನಿರ್ವಹಿಸುತ್ತಿತ್ತು" ಎಂದು ತಿಳಿಸಿದ್ದಾರೆ.
"ನಾವು ಪ್ರಜಾಪ್ರಭುತ್ವ ದೇಶಗಳ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಿದ್ದು, ಈ ಸಲುವಾಗಿ ಅಮೇರಿಕಾದ ಮಾತ್ರ ಮಹತ್ವದಾಗಿದೆ. ನಾವು ಅದನ್ನು ಸಮಪರ್ಕಕವಾಗಿ ನಿರ್ವಹಿಸಲಿದ್ದೇವೆ" ಎಂದಿದ್ದಾರೆ.