ವಾಷಿಂಗ್ಟನ್, ಆ 05 (DaijiworldNews/PY): "2022ರ ಅಂತ್ಯದ ವೇಳೆಗೆ ಕ್ವಾಡ್ ದೇಶಗಳು ಭಾರತದಲ್ಲಿ ಕನಿಷ್ಠ 100 ಕೋಟಿ ಡೋಸ್ಗಳನ್ನು ಉತ್ಪಾದಿಸಲಿವೆ" ಎಂದು ಶ್ವೇತಭವನ ಹೇಳಿದೆ.
ಸಾಂದರ್ಭಿಕ ಚಿತ್ರ
ಭಾರತ ಸೇರಿದಂತೆ, ಅಮೇರಿಕಾ, ಜಪಾನ್ ಹಾಗೂ ಆಸ್ಟ್ರೇಲಿಯಾ ದೇಶಗಳು ಕ್ವಾಡ್ ಗುಂಪಿನಲ್ಲಿ ಒಳಗೊಂಡಿವೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ, "ಮಾರ್ಚ್ನಲ್ಲಿ ನಡೆದಿದ್ದ ಮೊದಲ ಶೃಂಗ ಸಭೆಯಲ್ಲಿ ಕ್ವಾಡ್ ನಾಯಕರು, ಆಗ್ನೇಯ ಏಷ್ಯಾ ದೇಶಗಳಿಗೆ 100 ಕೋಟಿ ಡೋಸ್ ಲಸಿಕೆ ಒದಗಿಸಲು ಒಪ್ಪಿಕೊಂಡಿದ್ದರು" ಎಂದು ಹೇಳಿದ್ದಾರೆ.
"ಈವರೆಗೆ ಅಮೇರಿಕಾ ಜಗತ್ತಿಗೆ 11 ಕೋಟಿ ಲಸಿಕೆಗಳನ್ನು ನೀಡಿದೆ. ಬೇರೆ ಯಾವುದೇ ದೇಶಗಳು ಈವರೆಗೆ ಇಷ್ಟು ಪ್ರಮಾಣದ ಲಸಿಕೆಗಳನ್ನು ಇತರರೊಂದಿಗೆ ಹಂಚಿಕೊಂಡಿಲ್ಲ. ಫೈಜರ್ ಲಸಿಕೆಯ 50 ಕೋಟಿ ಡೋಸ್ಗಳನ್ನು ಅಮೇರಿಕಾ ದಾನ ಮಾಡಲಿದ್ದು, ಅದಕ್ಕಿ ಈ ತಿಂಗಳ ಅಂತ್ಯದಲ್ಲಿ ಚಾಲನೆ ಸಿಗಲಿದೆ" ಎಂದಿದ್ದಾರೆ.