ಲಾಹೋರ್, ಆ.07 (DaijiworldNews/HR): ಪಾಕಿಸ್ತಾನದಲ್ಲಿ ಹಿಂದೂ ದೇವಸ್ಥಾನದ ಮೇಲೆ ದಾಳಿ ನಡೆಸಿ ಪ್ರತಿಮೆಗಳನ್ನು ಭಗ್ನಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 150 ಮಂದಿ ವಿರುದ್ಧ ಮೊಕದ್ದಮೆ ದಾಖಲಿಸಿ, 20 ಮಂದಿಯನ್ನು ಬಂಧಿಸಲಾಗಿದೆ.
ಹಿಂದು ಸಂಸ್ಕೃತಿಯ ದೇವಸ್ಥಾನದ ಮೇಲೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹಿಮ್ಯಾರ್ ಖಾನ್ ಜಿಲ್ಲೆಯ ಬೋಂಗ್ ಪ್ರದೇಶದಲ್ಲಿ ಗುಂಪೊಂದು ದಾಳಿ ನಡೆಸಿ ದೊಣ್ಣೆ, ಲಾಠಿಗಳು ಹಾಗೂ ಕಲ್ಲುಗಳನ್ನು ಬಳಸಿ ಅಲ್ಲಿನ ಪ್ರತಿಮೆಗಳನ್ನು ಧ್ವಂಸಗೊಳಿಸಿತ್ತು.
ಇನ್ನು ಎಂಟು ವರ್ಷದ ಬಾಲ ಆರೋಪಿಯನ್ನು ಬಂಧಿಸಲಾಗಿತ್ತು, ನ್ಯಾಯಾಲಯ ಆ ಬಾಲಕನ್ನು ಬಿಡುಗಡೆ ಮಾಡಿದ್ದನ್ನು ವಿರೋಧಿಸಿ ಭಾಂಗ್ ಪ್ರಾಂತ್ಯದಲ್ಲಿ ಪ್ರತಿಭಟನಾರ್ಥ ದೇವಸ್ಥಾನದ ಮೇಲೆ ದಾಳಿ ನಡೆಸಲಾಗಿತ್ತು.
ಪೊಲೀಸರು ದೇವಸ್ಥಾನಕ್ಕೆ ರಕ್ಷಣೆ ನೀಡಲು ವಿಫಲರಾಗಿದ್ದು, ಘಟನೆಯಿಂದ ಅಂತರಾಷ್ಟ್ರೀಯ ಮಟ್ಟದಲ್ಲಿ ಪಾಕ್ನ ಗೌರವಕ್ಕೆ ಧಕ್ಕೆ ಬರಲಿದೆ ಎಂದು ವ್ಯಾಖ್ಯಾನಿಸಿತ್ತು.