ಲಂಡನ್,ಆ.08 (DaijiworldNews/HR): ಬ್ರಿಟನ್ಗೆ ಭಾರತೀಯರು ಪ್ರಯಾಣಿಸುವುದರ ಮೇಲೆ ಹೇರಲಾಗಿದ್ದ ನಿರ್ಬಂಧಗಳನ್ನು ಸಡಿಲಿಸಲಾಗಿದ್ದು, ಭಾರತವನ್ನು 'ಕೆಂಪು ಪಟ್ಟಿ'ಯಿಂದ 'ಹಳದಿ ಪಟ್ಟಿ'ಗೆ ಸೇರಿಸಲಾಗಿದೆ ಎಂದು ತಿಳಿದು ಬಂದಿದೆ.
ಸಾಂಧರ್ಭಿಕ ಚಿತ್ರ
ಪೂರ್ಣ ಪ್ರಮಾಣದಲ್ಲಿ ಕೊರೊನಾ ಲಸಿಕೆ ಪಡೆದಿರುವ ಭಾರತದ ಪ್ರಯಾಣಿಕರು ಬ್ರಿಟನ್ನಲ್ಲಿ 10 ದಿನಗಳ ಕಾಲ ಹೋಟೆಲ್ ಕ್ವಾರಂಟೈನ್ನಲ್ಲಿ ಇರಬೇಕಾದ ಅಗತ್ಯವಿಲ್ಲ. ಅದರ ಬದಲಿಗೆ 10 ದಿನಗಳ ಕಾಲ ಮನೆ ಕ್ವಾರಂಟೈನ್ನಲ್ಲಿ ಇರಬೇಕಾಗುತ್ತದೆ ಎಂದು ಆರೋಗ್ಯ ಮತ್ತು ಸಾಮಾಜಿಕ ಸಂರಕ್ಷಣೆ ಇಲಾಖೆ ತಿಳಿಸಿದೆ.
ಇನ್ನು "ಬ್ರಿಟನ್ಗೆ ಬಂದ ಬಳಿಕ ಸರ್ಕಾರ ಅನುಮೋದಿಸಿದ ಆರೈಕೆ ಕೇಂದ್ರಗಳಲ್ಲಿ 10 ದಿನಗಳ ಕಾಲ ಪ್ರತ್ಯೇಕವಾಸದಲ್ಲಿ ಇರಬೇಕು ಎಂಬ ನಿರ್ಬಂಧ ಈ ಹೊದೆ ಇತ್ತು. ಇದಕ್ಕಾಗಿ ಹೆಚ್ಚುವರಿಯಾಗಿ ತಲಾ 1.80 ಲಕ್ಷ ಶುಲ್ಕ ನೀಡಬೇಕಾಗಿತ್ತು. ಆದರೆ ಈಗ ಈ ನಿಲಯ ಇಲ್ಲ" ಎಂದು ಇಲಾಖೆ ತಿಳಿಸಿದೆ.