ಸಿಂಗಾಪುರ, ಆ 10 (DaijiworldNews/MS): 13 ತಿಂಗಳ ತಿಂಗಳ ಹಿಂದೆ ಜನಿಸಿದ ವಿಶ್ವದ ಅತೀ ಕಡಿಮೆ ತೂಕವಿದ್ದ ಶಿಶುವನ್ನು ಸಿಂಗಾಪುರ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. ಕ್ವೆಕ್ ಯು ಕ್ಸುಯಾನ್ ಹೆಸರಿನ ಈ ಮಗು ಸಿಂಗಾಪುರದ ನ್ಯಾಷನಲ್ ಯುನಿವರ್ಸಿಟಿ ಆಸ್ಪತ್ರೆಯಲ್ಲಿ ಜೂ.09 ರಂದು ಜನಿಸಿತ್ತು. ಈ ಮಗು ಒಂದು ಸೇಬುಹಣ್ಣಿನಷ್ಟೂ ಅಂದರೆ ಕೇವಲ 212 ಗ್ರಾಂ ತೂಕವನ್ನು ಹೊಂದಿತ್ತು.
25 ವಾರಗಳಲ್ಲಿ ತುರ್ತು ಸಿಸೇರಿಯನ್ ಮೂಲಕ ಹೆರಿಗೆಯಾದಾಗ ಕೇವಲ 24 ಸೆ.ಮೀ ಗಳಷ್ಟು ಉದ್ದವಿತ್ತು. ಅವಳ ತೊಡೆಯ ಗಾತ್ರವು ಬೆರಳಿನ ಗಾತ್ರದ್ದಾಗಿತ್ತು, ಮತ್ತು ಮಗುವಿಗೆ 'ಬದುಕುಳಿಯುವ ಅವಕಾಶ ತೀರಾ ಕಡಿಮೆಯಿತ್ತು. ವೈದ್ಯರಿಗೆ ಅಕಾಲಿಕ ಮಗುವಿಗೆ ಚಿಕಿತ್ಸೆ ನೀಡುವುದು ಮತ್ತೊಂದು ಸವಾಲಾಗಿತ್ತು ಚರ್ಮವು ದುರ್ಬಲವಾಗಿತ್ತು ವೈದ್ಯಕೀಯ ಶೋಧಕ, ಬ್ಯಾಂಡೆಡ್ ಹಾಕಲು ಸಾಧ್ಯವಾಗಲಿಲ್ಲ, ದೇಹವು ತುಂಬಾ ಚಿಕ್ಕದಾಗಿತ್ತು, ವೈದ್ಯರು ಸಣ್ಣ ಉಸಿರಾಟದ ಟ್ಯೂಬ್ ಅನ್ನು ಹುಡುಕಬೇಕಾಯಿತು. ಆರೈಕೆದಾರರು ಡೈಪರ್ ಗಳನ್ನು ಕತ್ತರಿಸಬೇಕಾಯಿತು, ತೂಕದ , ಗಾತ್ರದ ಅನುಸಾರ ಔಷಧಿಯ ಲೆಕ್ಕಾಚಾರವನ್ನು ದಶಮಾಂಶ ಅಂಶಗಳಿಗೆ ಇಳಿಯಬೇಕಾಗಿತ್ತು.
ಇದೀಗ ಮಗುವಿನ ತೂಕ 6.2 ಕೆ.ಜಿ ತೂಕವಾಗಿದೆ. ಆಕೆಯ ಪೋಷಕರಿಗೆ ಕೆಲವು ವೈದ್ಯಕೀಯ ಸಲಕರಣೆಗಳಾ ಬಳಕೆಯ
ಬಗ್ಗೆ ತರಬೇತಿ ನೀಡಲಾಗಿದ್ದು, ಮನೆಯಲ್ಲೇ ಚಿಕಿತ್ಸೆ ಮುಂದುವರಿದೆ.