ವಾಷಿಂಗ್ಟನ್, ಆ 10 (DaijiworldNews/PY): "ಅಫ್ಘಾನಿಸ್ತಾನಕ್ಕೆ ಭಾರತವು ಹಲವು ರೀತಿಯಲ್ಲಿ ನೆರವು ನೀಡಿದ್ದು, ತರಬೇತಿ ಹಾಗೂ ಮೂಲಸೌಕರ್ಯ ಸುಧಾರಣೆಯ ವಿಷಯದಲ್ಲಿ ಭಾರತ ರಚನಾತ್ಮಕ ಪಾತ್ರವಹಿಸಿದೆ" ಎಂದು ಪೆಂಟಗನ್ ಮಾಧ್ಯಮ ಕಾರ್ಯದರ್ಶಿ ಜಾನ್ ಕಿರ್ಬಿ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಾನ್ ಕಿರ್ಬಿ, "ಸ್ಥಿರ ಹಾಗೂ ಉತ್ತಮ ಆಡಳಿತ ಕಾಯ್ದುಕೊಳ್ಳುವಲ್ಲಿ ನೆರವಾಗುವ ಈ ರೀತಿಯಾದ ಕ್ರಮಗಳು ಹಾಗೂ ಪ್ರಯತ್ನಗಳು ಸ್ವಾಗತಾರ್ಹ" ಎಂದಿದ್ದಾರೆ.
"ಅಮೇರಿಕಾವು, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಗಡಿಯುದ್ಧಕ್ಕೂ ಇರುವ ಸುರಕ್ಷಿತ ತಾಣಗಳ ಬಗ್ಗೆ ಪಾಕ್ನ ಮುಖ್ಯಸ್ಥರ ಜೊತೆ ಮಾತುಕತೆ ನಡೆಸುತ್ತಿದೆ" ಎಂದು ತಿಳಿಸಿದ್ದಾರೆ.
"ಗಡಿಯಲ್ಲಿರುವ ಈ ತಾಣಗಳು, ಅಫ್ಘಾನಿಸ್ತಾನದ ಒಳಗೆ ಅಭದ್ರತೆ ಹಾಗೂ ಅಸ್ಥಿರತೆಯನ್ನು ಸೃಷ್ಟಿಸುತ್ತಿರುವುದನ್ನು ನಾವು ಗಮನದಲ್ಲಿಟ್ಟುಕೊಂಡಿದ್ದೇವೆ. ಈ ಬಗ್ಗೆ ಪಾಕ್ನ ನಾಯಕರ ಜೊತೆ ಚರ್ಚೆ ಮಾಡುವ ಬಗ್ಗೆ ಯೋಚನೆ ಮಾಡುವುದಿಲ್ಲ" ಎಂದಿದ್ದಾರೆ.
"ಪಾಕಿಸ್ತಾನದ ನಾಯಕರ ಜೊತೆ ಅಮೇರಿಕಾ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನದ ಗಡಿಯುದ್ದಕ್ಕೂ ಇರುವ ಸುರಕ್ಷಿತ ತಾಣಗಳ ಬಗ್ಗೆ ಚರ್ಚೆ ನಡೆಸಲಿದೆ" ಎಂದು ತಿಳಿಸಿದ್ದಾರೆ.