ಇಟಲಿ,ಆ 12 (DaijiworldNews/MS): ಮೈಸೂರಿನ ನಿವಾಸಿ, ಉದಯೋನ್ಮುಖ ಫುಟ್ಬಲ್ ಆಟಗಾರ 24 ವರ್ಷದ ಯಶವಂತ ಕುಮಾರ್ ಇಟಲಿಯ ರೋಮ್ನಲ್ಲಿ ಇತ್ತೀಚೆಗೆ ಜಲಪಾತದಲ್ಲಿ ಕಾಲುಜಾರಿ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ಎನ್.ಆರ್.ಮೊಹಲ್ಲಾದ ಎನ್.ಕುಮಾರ್ ಮತ್ತು ಎನ್.ರೂಪಾ ದಂಪತಿ ಪುತ್ರರಾದ ಅವರು ಇಟಲಿಯ ‘ಸೀರಿ ಬಿ ಫುಟ್ಸಲ್ ಲೀಗ್’ನಲ್ಲಿ ಕ್ಯಾಲ್ಸಿಯೊ ಸಿ5 ತಂಡದೊಂದಿಗೆ ಎರಡು ವರ್ಷಗಳ ಒಪ್ಪಂದದ ಮೇಲೆ 2019 ರಲ್ಲಿ ಇಟಲಿಗೆ ಹೋಗಿದ್ದರು
ಕಳೆದ ಮೂರು ನಾಲ್ಕು ದಿನಗಳಿಂದ ಅವರ ಮೊಬೈಲ್ ಫೋನ್ ಸಂಪರ್ಕಕ್ಕೆ ಸಿಗಲಿಲ್ಲ. ಆ.6 ರಂದು ತಂಡದ ಸಹ ಆಟಗಾರರಿಗೆ ಕರೆ ಮಾಡಿ ವಿಚಾರಿಸಿದಾಗ ಮೃತಪಟ್ಟ ವಿವರ ಲಭಿಸಿದೆ. ಜಲಪಾತದಲ್ಲಿ ಬಿದ್ದು ಮೃತಪಟ್ಟಿದ್ದು ಕೊಳೆತ ಸ್ಥಿತಿಯಲ್ಲಿ ಶವ ದೊರಕಿರುವುದಾಗಿ ಅಲ್ಲಿನ ಪೊಲೀಸರೂ ಖಚಿತಪಡಿಸಿದ್ದಾರೆ. ಆ.31ರ ವರೆಗೆ ಅಲ್ಲಿಗೆ ವಿಮಾನ ಸೌಲಭ್ಯ ಇಲ್ಲವಾಗಿರುವುದರಿಂದ ಆದ್ದರಿಂದ ಅಲ್ಲಿ ರುವ ಕನ್ನಡಿಗರು ಸೇರಿ ಅಂತ್ಯಕ್ರಿಯೆ ನೆರವೇರಿಸಿದ್ದಾರೆ’ ಎಂದು ಕುಟುಂಬದ ಮೂಲತಿಳಿಸಿದೆ.
ಫುಟ್ಬಾಲ್ನ ರೂಪಾಂತರ ಕ್ರೀಡೆಯಾಗಿರುವ ಫುಟ್ಸಲ್ಅನ್ನು ಒಳಾಂಗಣದಲ್ಲಿ ಆಡಲಾಗುತ್ತದೆ. ಒಂದು ತಂಡದಲ್ಲಿ ಐವರು ಆಟ ಗಾರರು ಇರುವರು. ಯಶವಂತ ಸಣ್ಣ ವಯಸ್ಸಿನಲ್ಲೇ ಈ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡು ತರಬೇತಿ ಪಡೆದು ಕೊಂಡಿದ್ದರು. ವಿದ್ಯಾ ವರ್ಧಕ ಎಂಜಿನಿ ಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪೂರೈಸಿ ಇಟಲಿಗೆ ತೆರಳಿದ್ದರು.