ಕಾಬೂಲ್, ಆ 13 (DaijiworldNews/MS): ಅಫ್ಘಾನಿಸ್ಥಾನ ದೇಶದಲ್ಲಿ ವಿಧ್ವಂಸದಕ ಕೃತ್ಯಗಳನ್ನು ನಡೆಸುತ್ತಿರುವ ತಾಲಿಬಾನ್ ಇದೀಗ ಅಫ್ಘಾನ್ ನ ಎರಡನೇ ಅತೀ ದೊಡ್ಡ ನಗರ ಕಂದಹಾರ್ ನ್ನು ಕೂಡ ವಶಪಡಿಸಿಕೊಂಡಿದೆ. ಮಿಂಚಿನ ದಾಳಿಯಲ್ಲಿ ಒಂದು ವಾರದಲ್ಲಿ ಅರ್ಧಕ್ಕಿಂತಲೂ ಹೆಚ್ಚು ದೇಶಗಳನ್ನು ವಶಪಡಿಸಿಕೊಂಡಿದ್ದ ತಾಲಿಬಾನ್ ಉಗ್ರರು ಕಾಬೂಲ್ಗೆ ಸಮೀಪದ ಪ್ರಮುಖ ಜಿಲ್ಲಾ ರಾಜಧಾನಿಯನ್ನು ವಶಪಡಿಸಿಕೊಂಡ ಬಳಿಕ ಮೂರನೇ ಅತಿದೊಡ್ಡ ನಗರವನ್ನು ತನ್ನ ವಶಕ್ಕೆ ತಾಲಿಬಾನ್ ಪಡೆದುಕೊಂಡಿದೆ.
ಈ ಬಗ್ಗೆ ಸ್ವತಂ ತಾಲಿಬಾನ್ ವಕ್ತಾರ ಟ್ವೀಟ್ ಮಾಡಿ "ಕಂದಹಾರ್ ನಮ್ಮ ವಶವಾಗಿದೆ. ನಗರದ ಹುತಾತ್ಮರ ಚೌಕವನ್ನು ಮುಜಾಹಿದ್ದೀನ್ ತಲುಪಿದೆ" ಎಂದು ಹೇಳಿದೆ.
ಅಫ್ಘಾನಿಸ್ತಾನದ ಸರ್ಕಾರ ಉತ್ತರ, ದಕ್ಷಿಣ ಮತ್ತು ಪಶ್ಚಿಮದ ಹೆಚ್ಚಿನ ಭಾಗವನ್ನು ಪರಿಣಾಮಕಾರಿಯಾಗಿ ಕಳೆದುಕೊಂಡಿದ್ದು ಮತ್ತು ರಾಜಧಾನಿ ಮಾತ್ರ ಸರ್ಕಾರ ತನ್ನ ವಶದಲ್ಲಿಯೇ ಇರಿಸಿಕೊಂಡಿದೆ.
ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದಲ್ಲಿ ಗುರುವಾರ ರಾಜಧಾನಿ ಕಾಬೂಲ್ಗೆ ಸಮೀಪದಲ್ಲಿಯೇ ಇರುವ ಘಜ್ನಿ ಪ್ರಾಂತ್ಯದ ರಾಜಧಾನಿಯನ್ನು ವಶಪಡಿಸಿಕೊಂಡಿದ್ದಾರೆ. ಅದಕ್ಕೆ ಪೂರಕವಾಗಿ ತತ್ತರಿಸಿ ಹೋಗಿರುವ ಅಫ್ಘಾನಿಸ್ತಾನ ಅಧ್ಯಕ್ಷ ಅಶ್ರಫ್ ಘನಿ ನೇತೃತ್ವದ ಸರ್ಕಾರ ಉಗ್ರರು ಹಿಂಸಾಕೃತ್ಯಗಳನ್ನು ನಿಲ್ಲಿಸಿದರೆ ಅಧಿಕಾರದಲ್ಲಿ ಸಹಭಾಗಿತ್ವ ನೀಡುವುದಾಗಿ ಹೇಳಿದೆ.