ಕಾಬೂಲ್, ಆ 14 (DaijiworldNews/PY): ಅಫ್ಘಾನಿಸ್ತಾನದಲ್ಲಿ ಭಾರತವು ಮಾನವೀಯ ನೆಲೆಯಲ್ಲಿ ಮಾಡಿರುವ ಕಾರ್ಯಗಳು ಹಾಗೂ ಅಭಿವೃದ್ದಿ ಕಾರ್ಯದ ಕುರಿತು ತಾಲಿಬಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದು, ಆದರೆ, ಸೇನಾ ಹಸ್ತಕ್ಷೇಪ ಮಾಡದಂತೆ ಎಚ್ಚರಿಸಿದೆ.
"ಭಾರತ, ಸೇನೆಯಾಗಿ ಅಫ್ಘಾನಿಸ್ತಾನಕ್ಕೆ ಬಂದಲ್ಲಿ ಹಾಗೂ ಅವರ ಅಸ್ತಿತ್ವವನ್ನು ಪ್ರಕಟಿಸಿದ್ದಲ್ಲಿ ಅವರಿಗೆ ನಾವು ಒಳ್ಳೆಯವರಾಗಿರುವುದಿಲ್ಲ. ಅವರು, ಅಫ್ಘಾನಿಸ್ತಾನದಲ್ಲಿ ಇತರ ರಾಷ್ಟ್ರಗಳು ಹಸ್ತಕ್ಷೇಪ ಮಾಡಿದ್ದನ್ನು ನೋಡಿದ್ದಾರೆ. ಹಾಗಾಗಿ ಅವರಿಗೆ ಮುಕ್ತ ಆಯ್ಕೆಯಾಗಿರಬಹುದು. ಅಫ್ಘಾನ್ ಜನರಿಗೆ, ರಾಷ್ಟ್ರೀಯ ಯೋಜನೆಗಳಿಗೆ ಅವರ ನೆರವಿಗೆ ನಮ್ಮ ಮೆಚ್ಚುಗೆ ಇದೆ" ಎಂದು ಸುದ್ದಿಸಂಸ್ಥೆಯೊಂದಕ್ಕೆ ತಾಲಿಬಾನ್ನ ಕತಾರ್ ಮೂಲದ ವಕ್ತಾರ ಸುಹೈನ್ ಶಹೀನ್ ಹೇಳಿದ್ದಾರೆ.
ತಾಲಿಬಾನ್, ಅಫ್ಘಾನಿಸ್ತಾನದ ದಕ್ಷಿಣ ಭಾಗವನ್ನು ದಾಟಿ ಮೂರು ನಗರಗಳನ್ನು ವಶಪಡಿಸಿಕೊಂಡಿದೆ. ಅಫ್ಘಾನಿಸ್ತಾನದ ಶೇ.75 ಭಾಗದ ಮೇಲೆ ಈಗಾಗಲೇ ತಾಲಿಬಾನ್ ಹಿಡಿತ ಸಾಧಿಸಿದೆ.
ಈ ನಡುವೆ, ಅಫ್ಘಾನಿಸ್ತಾನದಲ್ಲಿ ಬಲ ಪ್ರಯೋಗದ ಮುಖೇನ ರಚನೆಯಾಗುವ ಯಾವುದೇ ಸರ್ಕಾರಕ್ಕೆ ಮಾನ್ಯತೆ ನೀಡದೇ ಇರಲು ಭಾರತ ಸೇರಿದಂತೆ ಅಮೇರಿಕಾ ಹಾಗೂ ಚೀನಾ ಹಾಗೂ 12 ರಾಷ್ಟ್ರಗಳು ನಿರ್ಧರಿಸಿವೆ.