ವಾಷಿಂಗ್ಟನ್, ಆ 16 (DaijiworldNews/PY): ತಾಲಿಬಾನ್ ಉಗ್ರರು ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ಹಿನ್ನೆಲೆ ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಾಲಿ ಅಧ್ಯಕ್ಷ ಜೊ ಬಿಡೆನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ.
ಜೊ ಬಿಡೆನ್ ಅವರು ಅಫ್ಗಾನಿಸ್ತಾನಕ್ಕೆ ಯಾವುದೇ ಅವಕಾಶ ನೀಡಿದ್ದಾರೋ ಅದಕ್ಕೆ ಅಪಮಾನಿತರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಂದರ್ಭ ಇದಾಗಿದೆ. ಅಮೇರಿಕಾದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಳ ಸೇರಿದಂತೆ ದೇಶೀಯ ವಲಸೆ ಆರ್ಥಿಕ ಹಾಗೂ ಇಂಧನ ನೀತಿಗಳ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ತಾಲಿಬಾನ್ಗಳು ಭಾನುವಾರ ಅಫ್ಗಾನಿಸ್ತಾದ ರಾಜಧಾನಿ ಕಾಬೂಲ್ ಅನ್ನು ವಶಪಡಿಸಿಕೊಂಡಿದ್ದಾರೆ. ಆ.31ರೊಳಗೆ ಅಫ್ಗಾನಿಸ್ತಾನದಿಂದ ಸಂಪೂರ್ಣ ಅಮೇರಿಕಾ ಸೇನೆಯನ್ನು ವಶಪಡಿಸಿಕೊಳ್ಳುವುದಾಗಿ ಜೋ ಬಿಡೆನ್ಗೆ ಸೂಚನೆ ನೀಡಿದ್ದಾರೆ. ಆದರೆ, ಇದಕ್ಕೆ ಇನ್ನೂ ಎರಡು ವಾರಗಳು ಇರುವ ಮುನ್ನವೇ ತಾಲಿಬಾನ್ ಕಾಬೂಲ್ ಅನ್ನು ವಶಪಡಿಸಿಕೊಂಡಿದೆ.
2020ರಲ್ಲಿ ದೋಹಾದಲ್ಲಿ ತಾಲಿಬಾನ್ನೊಂದಿಗೆ ನಡೆದ ಒಪ್ಪಂದದ ವೇಳೆ ಮೇ 2021ರೊಳಗೆ ಅಮೇರಿಕಾ ತನ್ನ ಎಲ್ಲಾ ಸೇನೆಯನ್ನು ವಶಪಡಿಸಿಕೊಳ್ಳುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಅಲ್ಲದೇ, ಉಗ್ರರಿಂದ ಕೆಲವೊಂದು ಭದ್ರತಾ ಗ್ಯಾರಂಟಿ ಕೂಡಾ ವಿನಿಮಯ ಮಾಡಿಕೊಳ್ಳಲಾಗಿತ್ತು. ಜೊ ಬಿಡೆನ್ ಅಧಿಕಾರಕ್ಕೆ ಬಂದ ಸಂದರ್ಭ ನೀಡಲಾಗಿದ್ದ ಗಡುವನ್ನು ಮುಂದಕ್ಕೆ ಹಾಕಲಾಗಿತ್ತು. ಅದಕ್ಕಾಗಿ ಯಾವುದೇ ರೀತಿಯಾದ ಷರತ್ತು ವಿಧಿಸಿರಲಿಲ್ಲ. ಈ ಮಧ್ಯೆ ಟ್ರಂಪ್ ಆಗಾಗ ವಾಗ್ದಾಳಿ ನಡೆಸುತ್ತಿದ್ದರು.