ಮಾಸ್ಕೋ, ಆ 17 (DaijiworldNews/MS): ಅಪ್ಘಾನಿಸ್ತಾನವೂ ತಾಲಿಬಾಲಿಗಳ ಕೈವಶವಾದ ಬೆನ್ನಲ್ಲೇ ತಾಲಿಬಾನ್ ಆಡಳಿತವೂ ಹಿಂದಿನ ಅಧ್ಯಕ್ಷ ಅಶ್ರಫ್ ಘನಿ ಅವರಿಗಿಂತ ಉತ್ತಮ, ಸಕಾರಾತ್ಮಕ ಮತ್ತು ವ್ಯಾವಹಾರಿಕವಾಗಿದೆ ಎಂದು ಹೇಳಿದೆ.
ಅಫ್ಘಾನಿಸ್ತಾನದಲ್ಲಿ ರಷ್ಯಾ ರಾಯಭಾರಿಯಾಗಿರುವ ಡ್ಮಿಟ್ರಿ ಝಿರ್ನೋವ್ ಈ ಬಗ್ಗೆ ಹೇಳಿಕೆ ನೀಡಿ, ತಾಲಿಬಾಲಿಗಳ ಆಡಳಿತವೂ, ಹಿಂದಿನ ಆಡಳಿತಕ್ಕಿಂತ ಮೊದಲ 24 ಗಂಟೆಗಳ ಅವಧಿಗಿಂತ ಕಾಬೂಲ್ ಅನ್ನು ಸುರಕ್ಷಿತವಾಗಿಸಿದ್ದಾರೆ ಎಂದಿದ್ದಾರೆ.
"ಪರಿಸ್ಥಿತಿ ಶಾಂತಿಯುತವಾಗಿದೆ ಕಾಬೂಲ್ ನಗರದಲ್ಲಿ ಎಲ್ಲವೂ ಶಾಂತವಾಗಿದೆ. ಈಗ ತಾಲಿಬಾನ್ ಅಡಿಯಲ್ಲಿರುವ ಕಾಬೂಲ್ನ ಪರಿಸ್ಥಿತಿ (ಅಧ್ಯಕ್ಷ) ಅಶ್ರಫ್ ಘನಿಗಿಂತ ಉತ್ತಮವಾಗಿದೆ" ಎಂದು ಮಾಸ್ಕೋದ ಎಖೋ ಮಾಸ್ಕ್ವಿ ರೇಡಿಯೋ ಕೇಂದ್ರದೊಂದಿಗೆ ಮಾತನಾಡುತ್ತಾ ಝಿರ್ನೋವ್ ಅಭಿಪ್ರಾಯಪಟ್ಟಿದ್ದಾರೆ.
ವಿಶ್ವದಾದ್ಯಂತ ಮಿಂಚಿನ ವೇಗದ ಬೆರಗುಗೊಳಿಸುವಂತೆ ತಾಲಿಬಾನ್ ದೇಶದ ನಿಯಂತ್ರಣವನ್ನು ವಶಪಡಿಸಿಕೊಂಡಿದ್ದರಿಂದ ಘನಿ ಭಾನುವಾರ ಪಲಾಯನ ಮಾಡಿದರು. ಅವರು ರಕ್ತಪಾತವನ್ನು ತಡೆಯಲು ಬಯಸಿದ್ದರಿಂದ ದೇಶವನ್ನು ತೊರೆದರು ಎಂದು ಹೇಳಿದರು.