ನ್ಯೂಯರ್ಕ್ ,ಆ 17 (DaijiworldNews/MS): ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಕೈವಶವಾದ ಬಳಿಕ ಜಗತ್ತಿನಾದ್ಯಂತ ಅನೇಕ ದೇಶಗಳು ಎಚ್ಚರಿಕೆಯ ನಿಲುವು ತಳೆದಿವೆ. ಇದೇ ವೇಳೆ, ತಂತ್ರಜ್ಞಾನ ಲೋಕದ ದಿಗ್ಗಜ ಫೇಸ್ಬುಕ್ ತಾಲಿಬಾನ್ ಮೇಲೆ ಬಹಿಷ್ಕಾರ ಹೇರಿದೆ.
ಫೇಸ್ಬುಕ್ ತಾಲಿಬಾನ್ ಅನ್ನು 'ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿದ್ದು ಅದರ ತಾಲಿಬಾನ್ ನ ಎಲ್ಲಾ ವಿಚಾರಗಳನ್ನು ನಿಷೇಧಿಸಿದೆ. ಅಮೆರಿಕದ ಕಾನೂನಿನ ಅನುಸಾರ ಭಯೋತ್ಪಾದಕ ಸಂಘಟನೆ ಬೆಂಬಲಿಸುವ ಎಲ್ಲಾ ಸರಕನ್ನು ತನ್ನೆಲ್ಲಾ ಪ್ಲಾಟ್ಫಾರಂಗಳಿಂದಲೂ ಕಿತ್ತೊಗೆಯ್ಯುವುದಾಗಿ ತಿಳಿಸಿದೆ. 'ಡೇಂಜರಸ್ ಆರ್ಗನೈಸೇಶನ್ ಪಾಲಿಸಿ'ಗಳ ಅಡಿಯಲ್ಲಿ ತಾಲಿಬಾನ್ ಅನ್ನು ನಿಷೇಧಿಸಿದೆ ಎಂದು ಹೇಳಿದೆ.
ಅಪಾಯಕಾರಿ ಸಂಘಟನೆಯ ನೀತಿಗಳ ಅಡಿಯಲ್ಲಿ ನಾವು ಅವರನ್ನು ನಮ್ಮ ಸೇವೆಗಳಿಂದ ನಿಷೇಧಿಸಿದ್ದೇವೆ. ಇದರರ್ಥ ನಾವು ತಾಲಿಬಾನ್ ಪರವಾಗಿ ನಿರ್ವಹಿಸುವ ಖಾತೆಗಳನ್ನು ತೆಗೆದುಹಾಕುತ್ತೇವೆ ಮತ್ತು ಇದಲ್ಲದೆ ಅವರನ್ನು ಪ್ರಶಂಸುವ, ಬೆಂಬಲಿಸುವ ವಿಚಾರಗಳನ್ನು ನಿಷೇಧಿಸುತ್ತೇವೆ ಎಂದು ಹೇಳಿದೆ.
ಈ ಸಂಘಟನೆಗೆ ಸಂಬಂಧಿಸಿದ ಯಾವುದೇ ಸರಕಗಳು ತನ್ನ ಪೋರ್ಟಲ್ಗಳಲ್ಲಿ ಕಂಡುಬಂದರೆ ಕೂಡಲೇ ಅದನ್ನು ಕಿತ್ತೊಗೆಯಲು ಅಫ್ಘನ್ ತಜ್ಞರ ತಂಡವನ್ನೇ ನೇಮಕ ಮಾಡುವುದಾಗಿ ತಿಳಿಸಿದೆ.
ನಾವು ಅಫ್ಘಾನಿಸ್ತಾನದ ಪರಿಣತರ ತಂಡವನ್ನು ಹೊಂದಿದ್ದೇವೆ, ಅವರು ಸ್ಥಳೀಯ ದಾರೀ ಮತ್ತು ಪಾಷ್ಟೋ ಭಾಷಿಕರು ಹಾಗೂ ಸ್ಥಳೀಯ ಸನ್ನಿವೇಶದ ಜ್ಞಾನವನ್ನು ಹೊಂದಿದ್ದಾರೆ, ನಮ್ಮ ವೇದಿಕೆಯಲ್ಲಿ ಉದಯೋನ್ಮುಖ ಸಮಸ್ಯೆಗಳ ಬಗ್ಗೆ ಗುರುತಿಸಲು ಮತ್ತು ಎಚ್ಚರಿಸಲು ಸಹಾಯ ಮಾಡುತ್ತಾರೆ ಎಂದುಪೇಸ್ ಬುಕ್ ವಕ್ತಾರರು ತಿಳಿಸಿದ್ದಾರೆ.
ಆದಾಗ್ಯೂ, ತಾಲಿಬಾನ್ಗಳು ವಾಟ್ಸಾಪ್ ಅನ್ನು ಸಂವಹನಕ್ಕಾಗಿ ಬಳಸುತ್ತಿದ್ದಾರೆ ಎಂಬ ವರದಿಗಳಿವೆ.