ದುಬೈ, ಆ.19 (DaijiworldNews/HR): ದೇಶದಿಂದ ಹೊರನಡೆಯುವಾಗ ಅಪಾರ ಪ್ರಮಾಣದ ಹಣ ತೆಗೆದುಕೊಂಡು ಹೋಗಿರುವ ಆರೋಪಗಳನ್ನು ಅವರು ತಳ್ಳಿ ಹಾಕಿರುವ ಅಫ್ಗಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ, "ನಾನು ಧರಿಸಿದ್ದ ಒಂದು ಸಾಂಪ್ರದಾಯಿಕ ಉಡುಪು, ಒಂದು ನಿಲುವಂಗಿ, ಒಂದು ಜೊತೆಗೆ ಚಪ್ಪಲಿಯೊಂದಿಗೆ ನಾನು ದೇಶ ತೊರೆದಿದ್ದೆ" ಎಂದು ಹೇಳಿದ್ದಾರೆ.
ಬುಧವಾರ ವಿಡಿಯೊವೊಂದನ್ನು ಬಿಡುಗಡೆ ಮಾಡಿ ಅಫ್ಗನ್ನಿಂದ ಕಾಲ್ಕಿತ್ತ ತಮ್ಮ ನಿರ್ಧಾರವನ್ನು ಸಮರ್ಥನೆ ಮಾಡಿಕೊಂಡಿರುವ ಅವರು, "ದೇಶದಿಂದ ಹೊರನಡೆಯುವಾಗ ಅಪಾರ ಪ್ರಮಾಣದ ಹಣ ತೆಗೆದುಕೊಂಡು ಹೋಗಿರುವ ಆರೋಪಗಳನ್ನು ಅವರು ತಳ್ಳಿ ಹಾಕಿದ್ದು, ದೇಹದ ಮೇಲಿದ್ದ ಸಾಂಪ್ರದಾಯಿಕ ಉಡುಪು, ನಿಲುವಂಗಿ, ಒಂದು ಜೊತೆ ಚಪ್ಪಲಿ ಜತೆಗೆ ನಾನು ದೇಶವನ್ನು ತೊರೆಯಬೇಕಾಯಿತು. ಇತ್ತೀಚಿನ ದಿನಗಳಲ್ಲಿ ನಾನು ಹಣ ವರ್ಗಾಯಿಸಿರುವುದಾಗಿ ಆರೋಪಿಸಲಾಗಿದೆ. ಈ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದಿದ್ದಾರೆ.
ಇನ್ನು ಅಶ್ರಫ್ ಘನಿ ಅವರು 169 ದಶಲಕ್ಷ ಅಮೆರಿಕನ್ ಡಾಲರ್ನಷ್ಟು (1,256 ಕೋಟಿ) ಹಣದೊಂದಿಗೆ ಪಲಾಯನ ಮಾಡಿರುವುದಾಗಿ ತಜಕಿಸ್ತಾನದಲ್ಲಿರುವ ಅಫ್ಗಾನಿಸ್ತಾನದ ರಾಯಭಾರಿ ಆರೋಪ ಮಾಡಿದ್ದರು.
ವಿಡಿಯೊ ಸಂದೇಶದಲ್ಲಿ ಘನಿ, ಅಫ್ಗನ್ ಭದ್ರತಾ ಪಡೆಗಳಿಗೆ ಧನ್ಯವಾದ ತಿಳಿಸಿದ್ದು, ಶಾಂತಿ ಪ್ರಕ್ರಿಯೆಯ ವೈಫಲ್ಯದಿಂದಾಗಿ ತಾಲಿಬಾನ್ ಅಧಿಕಾರವನ್ನು ಕಸಿದುಕೊಂಡಿತು ಎಂದು ಹೇಳಿದ್ದಾರೆ.