ಕಾಬೂಲ್, ಆ.20 (DaijiworldNews/HR): ಆಗಸ್ಟ್ 14 ರಿಂದ ಈ ವರೆಗೂ ನಡೆದ ಕಾರ್ಯಾಚರಣೆಯಲ್ಲಿ ಅಫ್ಘಾನಿಸ್ತಾನದಿಂದ 7,000 ಮಂದಿಯನ್ನು ಸ್ಥಳಾಂತರಿಸಲಾಗಿದೆ ಎಂದು ಪೆಂಟಗನ್ ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ಪೆಂಟಗನ್ , ಅಫ್ಘಾನಿಸ್ತಾನದಿಂದ ಹೊರ ನಡೆದಿರುವ ಮಂದಿಯ ಸಂಖ್ಯೆ 12,000 ಕ್ಕೆ ತಲುಪಿದ್ದು, ಅಮೇರಿಕಾ ಸೇನೆ ಹಾಗೂ ಕಾಬೂಲ್ನಲ್ಲಿ ಈಗ 5,200 ಒಟ್ಟು ತುಕಡಿಗಳಿದೆ" ಎಂದಿದೆ.
ಇನ್ನು ಅಮೇರಿಕಾದ ನಾಗರಿಕರನ್ನು ಏರ್ ಲಿಫ್ಟ್ ಮಾಡುವ ಜವಾಬ್ದಾರಿ ವಹಿಸಿಕೊಂಡಿರುವ ಆರ್ಮಿ ಆಪರೇಷನಲ್ ಟೆಸ್ಟ್ ಕಮಾಂಡ್ ನ ಕಮಾಂಡಿಂಗ್ ಜನರಲ್ ಮೇಜರ್ ಜನರಲ್ ಟೇಲರ್ ಮಾತನಾಡಿ, "ವಾಯು ಪ್ರದೇಶಕ್ಕೆ ಪ್ರವೇಶಿಸುವುದಕ್ಕೆ ಅನೇಕ ದ್ವಾರಗಳಿದ್ದು, ಇದು ಸುರಕ್ಷಿತ ಮತ್ತು ಕ್ರಮಬದ್ಧವಾದ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ" ಎಂದು ತಿಳಿಸಿದ್ದಾರೆ.