ಕಾಬೂಲ್, ಆ 21 (DaijiworldNews/MS): ಆಫ್ಟಾನಿಸ್ತಾನವನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಹಿಂಸಾಚಾರ ನಡೆಸುತ್ತಿರುವ ತಾಲಿಬಾಲ್ ವಿರುದ್ದ ತಿರುಗಿಬಿದ್ದಿರುವ ನಾಗರೀಕರು, ಹಾಗೂ ಅಫ್ಘಾನ್ ಸೇನೆ ಭಯೋತ್ಪಾದಕರಿಂದ ಮೂರೂ ಜಿಲ್ಲೆಗಳನ್ನು ವಶಕ್ಕೆ ಪಡೆದಿರುವ ಬಗ್ಗೆ ವರದಿಯಾಗಿದೆ.
ಅಮೆರಿಕ ಸೇನೆ ಮತ್ತು ನ್ಯಾಟೋ ಪಡೆಗಳಿಗೆ ನೆರವು ನೀಡಿದ ಆಫ್ಘಾನ್ ಜನರನ್ನು ತಾಲಿಬಾನ್ ಮನೆ ಮನೆಗೆ ನುಗ್ಗಿ ಪ್ರತೀಕಾರ ತೆಗೆದುಕೊಳ್ಳುತ್ತಿರುವ ತಾಲಿಬಾನಿಗಳ ನಡೆಯಿಂದ ಬೇಸತ್ತಿರುವ ಅಲ್ಲಿನ ಜನರ ಅವರ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ತಾಲಿಬಾನ್ ವಿರುದ್ಧ ಸಮರ ಸಾರಿರುವ ಆಫ್ಘಾನ್ನ ಹೋರಾಟಗಾರರು ಹಾಗೂ ಸೇನಾಪಡೆ ಕೆಲವು ತಾಲಿಬಾನಿಗಳನ್ನು ಹತ್ಯೆ ಮಾಡಿ ಅವರ ನಿಯಂತ್ರಣದಲ್ಲಿದ್ದ ಮೂರು ಜಿಲ್ಲೆಗಳನ್ನು ವಶಕ್ಕೆ ಪಡೆದಿದೆ. ಉತ್ತರ ಬಘ್ಲಾನ್ ಪ್ರಾಂತ್ಯದ ಪೊಲ್-ಇ- ಹೆಸಾರ್ ಜಿಲ್ಲೆಯನ್ನು ಆಫ್ಘನ್ ಪಡೆಗಳು ತಾಲಿಬಾನಿಗಳಿಂದ ವಶಕ್ಕೆ ಪಡೆದಿರುವುದಾಗಿ ಮಾಧ್ಯಮವೊಂದು ವರದಿ ಮಾಡಿದೆ. ಜೊತೆಗೆ ದೆಹ್ ಸಲಾಹ್ ಮತ್ತು ಖ್ವಸಾನ್ ಜಿಲ್ಲೆಗಳನ್ನೂ ಆಫ್ಘನ್ ಪಡೆಗಳು ವಶಕ್ಕೆ ಪಡೆದುಕೊಂಡಿವೆ ಎಂದು ವರದಿಯಾಗಿದೆ.