ಕಾಬೂಲ್, ಆ. 21 (DaijiworldNews/HR): ಅಫ್ಘಾನಿಸ್ತಾನವನ್ನು ವಶಕ್ಕೆ ಪಡೆದುಕೊಂಡಿರುವ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರೆದಿದ್ದು, ಇದೀಗ ಕಾಬೂಲ್ ಏರ್ಪೋರ್ಟ್ನಿಂದ 150 ಭಾರತೀಯರನ್ನು ಕಿಡ್ನ್ಯಾಪ್ ಮಾಡಲಾಗಿದೆ ಎಂದು ವರದಿಯಾಗಿದೆ.
ಕಾಬೂಲ್ ಏರ್ಪೋರ್ಟ್ನಿಂದ 150 ಭಾರತೀಯರ ಅಪಹರ ಮಾಡಿರುವುದಾಗಿ ಅಫ್ಘಾನಿಸ್ತಾನ ದೂತವಾಸದ ಸಿಬ್ಬಂದಿ ಮತ್ತು ರಾಯಭಾರ ಕಚೇರಿ ಸ್ಥಳೀಯ ಸಿಬ್ಬಂದಿಯಿಂದ ಮಾಹಿತಿ ನೀಡಲಾಗಿದೆ ಎಂದು ವರದಿಯಾಗಿದೆ.
ಇನ್ನು ಭಾರತೀಯರ ಕಿಡ್ನ್ಯಾಪ್ ಆಗಿರುವ ಕುರಿತಂತೆ ಭಾರತ ಸರ್ಕಾರ ಇನ್ನೂ ಖಚಿತ ಪಡಿಸಿಲ್ಲ. ಭಾರತದ ವಿದೇಶಾಂಗ ಇಲಾಖೆ ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.