ತೈಫೆ, ಆ 21 (DaijiworldNews/PY): "ತಾಲಿಬಾನ್ಗಳನ್ನು ಅನುಸರಿಸುವ ಕನಸನ್ನು ಚೀನಾ ಕಾಣುತ್ತಿದೆ" ಎಂದು ತೈವಾನ್ ವಿದೇಶಾಂಗ ಸಚಿವ ಜೋಸೆಫ್ ವು ದೂರಿದ್ದಾರೆ.
ತೈವಾನ್ ಅಮೇರಿಕಾದ ಬೆಂಬಲದಿಂದ ಚೀನಾದ ವಿರೋಧವನ್ನು ಕಟ್ಟಿಕೊಂಡಿದ್ದು, "ಅಫ್ಗಾನಿಸ್ತಾನಕ್ಕೆ ಅಮೇರಿಕಾದಿಂದ ಆದ ಗತಿಯೇ ನಮಗೂ ಕೂಡಾ ಆಗಬಹುದೇ?" ಎನ್ನುವ ಬಗ್ಗೆ ತೈವಾನ್ನಲ್ಲಿ ಚರ್ಚೆ ನಡೆಯುತ್ತಿದೆ.
"ತೈವಾನ್ ಚೀನಾದ ಸಾರ್ವಭೌಮ ಪ್ರದೇಶವೆಂದು ಹೇಳಿಕೊಳ್ಳಲು ಅದು ಯತ್ನಿಸುತ್ತಿದೆ. ಚೀನಾ ತಾಲಿಬಾನ್ಗಳನ್ನು ಅನುಕರಿಸುವ ಕನಸು ಕಾಣುತ್ತಿದೆ" ಎಂದಿದ್ದಾರೆ.
"ಅಮೇರಿಕಾ ತೈವಾನ್ ಜನರ ಹಿತಾಸಕ್ತಿಗಳನ್ನು ಎತ್ತಿ ಹಿಡಿದಿರುವುದಕ್ಕೆ ಧನ್ಯವಾದಗಳು" ಎಂದು ಜೋಸೆಫ್ ವು ತಿಳಿಸಿದ್ದಾರೆ.
"ತನ್ನದೇ ಕ್ಸಿನ್ ಜಿಯಾಂಗ್ನಲ್ಲಿ ಚೀನಾ ಇಸ್ಲಾಮಿಕ್ ಉಗ್ರರ ಮೇಲೆ ಕಣ್ಣಿಟ್ಟಿದೆ. ಅಲ್ಲದೇ, ತಾಲಿಬಾನ್ ಜೊತೆಯೂ ಸಂಪರ್ಕ ಬೆಳೆಸಲು ಯತ್ನಿಸುತ್ತಿದೆ" ಎಂದಿದ್ದಾರೆ.
ರಾಜತಾಂತ್ರಿಕ ಮತ್ತು ಮಿಲಿಟರಿ ಒತ್ತಡವನ್ನು ಚೀನಾ ತೈವಾನ್ನ ಮೇಲೆ ಹೆಚ್ಚಿಸಿದೆ ಎಂದು ತೈವಾನ್ ಆರೋಪಿಸಿದೆ. ತೈವಾನ್ ಗಡಿಯಲ್ಲಿ ಚೀನಾದ ವಾಯುಪಡೆ ಹಾಗೂ ನೌಕಾಪಡೆಯ ಅಭ್ಯಾಸಗಳು ಅಮೇರಿಕಾ ಹಾಗೂ ಇತರ ಪಾಶ್ಚಿಮಾತ್ಯ ದೇಶಗಳನ್ನು ಭೀತಿ ಉಂಟುಮಾಡಿವೆ.