ಕಾಬೂಲ್, 21 (DaijiworldNews/HR): ಅಫ್ಘಾನಿಸ್ತಾನದ ಕಾಬೂಲ್ ಏರ್ಪೋರ್ಟ್ನಿಂದ ಅಪಹರಣವಾಗಿದ್ದ 150 ಭಾರತೀಯರು ಸುರಕ್ಷಿತವಾಗಿದ್ದಾರೆ ಎಂದು ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.
ಕಾಬೂಲ್ ಏರ್ಪೋರ್ಟ್ನಿಂದ ಕಿಡ್ನ್ಯಾಪ್ ಆಗಿದ್ದ ಭಾರತೀಯರ ಪಾಸ್ ಪೋರ್ಟ್ ಅನ್ನು ಪರಿಶೀಲಿಸಿದ ತಾಲಿಬಾನ್ ಉಗ್ರರು ಕಾಬೂಲ್ ಏರ್ಪೋರ್ಟ್ಗೆ ವಾಪಸ್ ಬಿಡುಗಡೆ ಮಾಡುವುದಾಗಿ ಹೇಳಿದ್ದು, ಭಾರತೀಯರು ಸದ್ಯಕ್ಕೆ ವಿಮಾನ ನಿಲ್ದಾಣದ ಗ್ಯಾರೇಜ್ ನಲ್ಲಿದ್ದಾರೆ ಎಂದು ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳು ಹೇಳಿವೆ.
ಇನ್ನು ಕಾಬೂಲ್ನ ಏರ್ ಪೋರ್ಟ್ ನಿಂದ 150 ಭಾರತೀಯರ ಅಪಹರಣ ಮಾಡಲಾಗಿದೆ ಎಂದು ಅಫ್ಘಾನಿಸ್ತಾನದ ಸ್ಥಳೀಯ ಮಾಧ್ಯಮಗಳಲ್ಲಿ ವರದಿಯಾಗಿದ್ದು, ಜೊತೆಗೆ ಅಫ್ಘಾನಿಸ್ತಾನ ದೂತವಾಸದ ಸಿಬ್ಬಂದಿ ಮತ್ತು ರಾಯಭಾರ ಕಚೇರಿ ಸ್ಥಳೀಯ ಸಿಬ್ಬಂದಿ ಭಾರತೀಯರು ಕಿಡ್ನ್ಯಾಪ್ ಆಗಿರುವ ಕುರಿತಂತೆ ಮಾಹಿತಿ ನೀಡಲಾಗಿತ್ತು.