ಜಿನಿವಾ, ಆ 22 (DaijiworldNews/PY): "ಅಫ್ಗಾನಿಸ್ತಾನದ ಸಂಘರ್ಷವು ಅಸಂಖ್ಯಾತ ಜನರು ಹಸಿವು ಹಾಗೂ ಅನಾರೋಗ್ಯಕ್ಕೀಡು ಮಾಡುತ್ತಿದೆ" ಎಂದು ಡಬ್ಲ್ಯುಹೆಚ್ಒ ಎಚ್ಚರಿಕೆ ನೀಡಿದ್ದು, ಆರೋಗ್ಯ ರಕ್ಷಣೆಯ ಕುರಿತು ಕಳವಳ ವ್ಯಕ್ತಪಡಿಸಿದೆ.
"ಅಫ್ಗಾನಿಸ್ತಾನದ ಮೂರನೇ ಒಂದರಷ್ಟು ಜನಸಂಖ್ಯೆಯು ಹಸಿವು ಹಾಗೂ ಐದು ವರ್ಷಕ್ಕಿಂತ ಕೆಳಗಿರುವ ಅರ್ಧಕ್ಕಿಂತಲೂ ಹೆಚ್ಚು ಮಕ್ಕಳಿ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ" ಎಂದು ಅಮೇರಿಕಾದ ಸಂಸ್ಥೆಯೊಂದು ವರದಿ ತಿಳಿಸಿದೆ.
ಈ ಸಂಸ್ಥೆಯ ಮಾಹಿತಿಯ ಪ್ರಕಾರ, "ಸದ್ಯದ ಬಿಕ್ಕಟ್ಟು ಅಫ್ಗಾನಿಸ್ತಾನದಲ್ಲಿರುವ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸಲಿದೆ" ಎಂದು ಡಬ್ಲ್ಯುಹೆಚ್ಒ ತಿಳಿಸಿದೆ.
"ಯಾವುದೇ ರೀತಿಯಾದ ಅಡೆತಡೆಗಳಿಲ್ಲದೇ ಆರೋಗ್ಯ ಸೇವೆಗಳು ದೇಶಾದ್ಯಂತ ಮುಂದುವರಿಯಬೇಕು. ಸ್ತ್ರೀಯರಿಗೆ ಮಹಿಳಾ ಆರೋಗ್ಯ ಕಾರ್ಯಕರ್ತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವತ್ತ ನಿಗಾವಹಿಸಬೇಕು. ಕರ್ತವ್ಯಕ್ಕೆ ಮರಳುವಂಯೆ ಮಹಿಳಾ ಸಿಬ್ಬಂದಿ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ" ಎಂದು ಡಬ್ಲ್ಯುಹೆಚ್ಒ ವಕ್ತಾರ ತಾರಿಕ್ ಜಸರೆವಿಕ್ ತಿಳಿಸಿದ್ದಾರೆ.
ಜನರಲ್ಲಿ ತಾಲಿಬಾನ್ ಆಡಳಿತದ ಕುರಿತು ಆತಂಕ ಮೂಡಿದ್ದು, ದೇಶ ತೊರೆಯಲು ವಿಮಾನ ನಿಲ್ದಾಣಗಳತ್ತ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ.