ವಾಷಿಂಗ್ಟನ್, ಆ 25 (DaijiworldNews/PY): ಜಿ-7 ರಾಷ್ಟ್ರಗಳು ತಾಲಿಬಾನ್ ವಿಷಯದಲ್ಲಿ ಒಗ್ಗಟ್ಟಾಗಿದ್ದು, ಅಫ್ಗಾನಿಸ್ತಾನವನ್ನು ಭಯೋತ್ಪಾದನೆಯ ನೆಲೆಯಾಗದಂತೆ ತಡೆಗಟ್ಟಲು ಒಪ್ಪಿಗೆ ನೀಡಿರುವುದಾಗಿ ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ತಿಳಿಸಿದ್ದಾರೆ.
ವಿಶ್ವಸಂಸ್ಥೆ, ಜಿ-7, ನ್ಯಾಟೋ ಹಾಗೂ ಯುರೋಪಿಯನ್ ಯೂನಿಯನ್ ಮುಖಂಡರುಗಳೊಂದಿಗೆ ನಡೆದ ವರ್ಚುವಲ್ ಸಭೆಯ ಬಳಿಕ ಮಾತನಾಡಿದ ಅವರು, "ತಾಲಿಬಾನ್ ಕ್ರಮಗಳಿಂದ ನಾವು ನಿರ್ಣಯಿಸುತ್ತೇವೆ. ನಾವು ಅಫ್ಗಾನ್ ಜನರಿಗೆ ಮಾನವೀಯ ಬದ್ಧತೆಯನ್ನು ನವೀಕರಿಸಿದ್ದೇವೆ. ಅಫ್ಗಾನ್ನ ಅನಿಯಮಿತ ಮಾನವೀಯ ಪ್ರವೇಶದೊಂದಿಗೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಗುಟೆರಸ್ ಅವರ ಪ್ರಸ್ತಾವನೆಯನ್ನು ನಾವು ಬೆಂಬಲಿಸಿದ್ದೇವೆ" ಎಂದಿದ್ದಾರೆ.
"ಅಫ್ಗಾನಿಸ್ತಾನವನ್ನು ಭಯೋತ್ಪಾದನೆಯ ನೆಲೆಯಾಗದಂತೆ ತಡೆಯುವುದು ಸೇರಿದಂತೆ ಅಫ್ಗಾನ್ನ ಯಾವುದೇ ಭವಿಷ್ಯದ ಸರ್ಕಾರದ ನ್ಯಾಯಸಮ್ಮತತೆಯು ಅಂತರಾಷ್ಟ್ರೀಯ ಬಾಧ್ಯತೆಗಳನ್ನು ಎತ್ತಿಹಿಡಿಯಲು ತಾಲಿಬಾನ್ ಕೈಗೊಳ್ಳುವ ವಿಧಾನವನ್ನು ಅವಲಂಬಿಸಿದೆ ಎಂದು ನಾವು ಒಪ್ಪಿಕೊಂಡಿದ್ದೇವೆ. ನಮ್ಮ ಪೈಕಿ ಯಾರೂ ಕೂಡಾ ತಾಲಿಬಾನ್ ಮಾತನ್ನು ತೆಗೆದುಕೊಳ್ಳುವುದಿಲ್ಲ ಎಂದು ಜಿ-7 ದೇಶಗಳು ಒಪ್ಪಿಕೊಂಡಿವೆ" ಎಂದು ತಿಳಿಸಿದ್ದಾರೆ.
ಯುರೋಪಿಯನ್ ಯೂನಿಯನ್, ಜಿ-7, ನ್ಯಾಟೋ ಹಾಗೂ ವಿಶ್ವಸಂಸ್ಥೆಯ ನಾಯಕರು ತಾಲಿಬಾನ್ ವಿಷಯದಲ್ಲಿ ಒಗ್ಗಟ್ಟಿನಿಂದ ನಿಲ್ಲುವುದಾಗಿ ಒಪ್ಪಿಕೊಂಡಿರುವುದಾಗಿ ಹೇಳಿದ್ದಾರೆ.