ಕಬೂಲ್ ಆ 25 (DaijiworldNews/MS): "ಮಹಿಳೆಯರು ಈಗಲೂ ಮನೆಯಲ್ಲೇ ಇರಬೇಕು . ಇದೊಂದು 'ತಾತ್ಕಾಲಿಕ' ನೀತಿ ಯಾಗಿದ್ದು, ಮಹಿಳೆಯರನ್ನು ರಕ್ಷಿಸುವ ಉದ್ದೇಶದಿಂದ ಈ ಆದೇಶ ಹೊರಡಿಸಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ.
ಮಹಿಳೆಯರನ್ನು ರಕ್ಷಿಸುವ ಉದ್ದೇಶವನ್ನು ಹೊಂದಿದ್ದೇವೆ. ತಾಲಿಬಾನ್ ಗೆ ಹೊಸದಾಗಿ ಸೇರ್ಪಡೆಯಾಗಿರುವ ಮತ್ತು ಇನ್ನೂ ಚೆನ್ನಾಗಿ ತರಬೇತಿಯನ್ನು ಪಡೆಯದ ನಮ್ಮ ಪಡೆಗಳು ಮಹಿಳೆಯರನ್ನು ದುರುಪಯೋಗ ಪಡಿಸಿಕೊಳ್ಳಬಹುದೆಂದು ನಾವು ಚಿಂತೆಗೊಳಗಾಗಿದ್ದೇವೆ. ನಿಯಮಗಳನ್ನು ಉಲ್ಲಂಘಿಸಿದವರೊಂದಿಗೆ ತೊಂದರೆಯಾಗದಂತೆ ನಡೆದುಕೊಳ್ಳುವ ತರಬೇತಿಯನ್ನು ಉಗ್ರಗಾಮಿಗಳಿಗೆ ನೀಡಿಲ್ಲ . ತಾಲಿಬಾನ್ ಮಹಿಳಾ ಸರ್ಕಾರಿ ಕಾರ್ಮಿಕರು ತಮ್ಮ ಕೆಲಸಕ್ಕೆ ಮರಳಲು ಕಾರ್ಯವಿಧಾನಗಳ ಬಗ್ಗೆ ಕೆಲಸ ಮಾಡುತ್ತಿದೆ. ಇದು ಜಾರಿಯಾಗುವವರೆಗೆ ಅವರು 'ಭದ್ರತೆ' ಕಾರಣಗಳಿಗಾಗಿ ಮನೆಯಲ್ಲೇ ಇರಬೇಕು ಎಂದು ಹೇಳಿದೆ.
ತಾಲಿಬಾನ್ ನ 1996-2001 ರ ಆಳ್ವಿಕೆಯಲ್ಲಿ, ಮಹಿಳೆಯರು ಕೆಲಸ ಮಾಡಲು ಸಾಧ್ಯವಾಗಿರಲಿಲ್ಲ, ಮಾತ್ರವಲ್ಲದೆ ಅನಿವಾರ್ಯವಾದರೆ ಮಾತ್ರ ಮನೆಯಿಂದ ಹೊರಬರಬೇಕಿತ್ತು. ತಮ್ಮ ಮುಖವನ್ನು ಮುಚ್ಚಿಕೊಳ್ಳಲು ಮತ್ತು ತಮ್ಮ ಮನೆಗಳಿಂದ ಹೊರಬರಲು ಬಯಸಿದರೆ ಪುರುಷ ಸಂಬಂಧಿಯೊಂದಿಗೆ ಇರಬೇಕಾಗಿತ್ತು.
ಈ ಬಾರಿ ತಮ್ಮ ಉದ್ಯೋಗಗಳು ಇಸ್ಲಾಮಿಕ್ ಕಾನೂನಿಗೆ ಅನುಗುಣವಾಗಿರುವವರೆಗೂ ಮಹಿಳೆಯರು ಕೆಲಸ ಮಾಡಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ.ಹುಡುಗಿಯರಿಗೆ ಶಿಕ್ಷಣದ ಹಕ್ಕನ್ನು ನಿರಾಕರಿಸುವುದಿಲ್ಲ ದಂಗೆಕೋರ ಗುಂಪು ಭರವಸೆ ನೀಡಿದರೂ, ಆಫ್ಘಾನಿಸ್ತಾನದ ಮಹಿಳೆಯರು ಭಯಭೀತರಾಗಿದ್ದಾರೆ.