ಅಪ್ಘಾನಿಸ್ತಾನ, ಆ 27 (DaijiworldNews/MS): ಕಾಬೂಲ್ ವಿಮಾನ ನಿಲ್ದಾಣದಲ್ಲಿ ನಡೆದ ಮಾರಣಾಂತಿಕ ಆತ್ಮಾಹುತಿ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತುಕೊಂಡಿದೆ. ಆ.26 ರಂದು ಅಮೆರಿಕ ನೇತೃತ್ವದಲ್ಲಿ ಸೇನಾ ಪಡೆಗಳ ಹಿಂತೆಗೆತ ಕಾರ್ಯಾಚರಣೆ ನಡೆಯುತ್ತಿದ್ದಾಗ ತಾಲೀಬಾನ್ ಆಡಳಿತವಿರುವ ಅಫ್ಘಾನಿಸ್ತಾನದಲ್ಲಿ ಈ ಅವಳಿ ಸ್ಫೋಟ ಸಂಭವಿಸಿತ್ತು.
ಸೈಟ್ ಮೇಲ್ವಿಚಾರಣೆ ಏಜೆನ್ಸಿ ಹೇಳುವ ಪ್ರಕಾರ " ಇಂದು ಎಲ್ಲಾ ಭದ್ರತಾ ಕೋಟೆಗಳನ್ನೂ ಭೇದಿಸಲು ಸಾಧ್ಯವಾಯಿತು ಮತ್ತು ತನ್ನ ಸ್ಫೋಟಕ ಬೆಲ್ಟ್ ಅನ್ನು ಸ್ಫೋಟಿಸುವ ಮೊದಲು ಯುಎಸ್ ಪಡೆಗಳ "ಐದು ಮೀಟರ್" ಒಳಗೆ ಹೋಗಲು ಸಾಧ್ಯವಾಯಿತು " ಎಂದು ಉಗ್ರ ಸಂಘಟನೆಯ ಪ್ರಚಾರ ವಿಭಾಗ ಹೇಳಿದೆ.
ಹೇಳಿಕೆಯಲ್ಲಿ ಕೇವಲ ಒಂದು ಬಾಂಬರ್ ಮತ್ತು ಒಂದು ಸ್ಫೋಟವನ್ನು ಉಲ್ಲೇಖಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಗುರುವಾರ ನಡೆದ ದಾಳಿಯಲ್ಲಿ ಕನಿಷ್ಠ ಎರಡು ಬಾಂಬ್ಗಳು ಸ್ಫೋಟಗೊಂಡಿವೆ ಎಂದು ಹೇಳಲಾಗಿದೆ.
ಸೇನಾ ಪಡೆಗಳ ಸ್ಥಳಾಂತರಿಸುವಿಕೆಯಲ್ಲಿ ತೊಡಗಿರುವ ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ಶಕ್ತಿಗಳ ಮೇಲೆ ಐಎಸ್ಐ ನ ಪ್ರಾದೇಶಿಕ ಸಂಘಟನೆ ಆಫ್ಘಾನಿಸ್ತಾನದಲ್ಲಿ ದಾಳಿ ನಡೆಸಲಿದೆ ಎಂಬ ಮಾಹಿತಿ ಇತ್ತು. ಆಫ್ಘಾನಿಸ್ತಾನ ತಾಲೀಬಾನ್ ವಶವಾದಾಗಿನಿಂದಲೂ ದೇಶ ತೊರೆಯುವುದಕ್ಕಾಗಿ ಸಾವಿರಾರು ಮಂದಿ ವಿಮಾನ ನಿಲ್ದಾಣದ ಹೊರಭಾಗದಲ್ಲಿ ಕಾಯುತ್ತಿದ್ದಾರೆ