ಇಸ್ಲಾಮಾಬಾದ್, ಆ 27 (DaijiworldNews/PY): ಅಫ್ಗಾನ್ನಿಂದ ಸ್ಥಳಾಂತರಗೊಂಡ ವಿದೇಶಿಗರಿಗೆ ಸ್ಥಳಾವಕಾಶ ನೀಡುವ ಸಲುವಾಗಿ ಇತರರಿಗೆ ಹೋಟೆಲ್ ಕೊಠಡಿಗಳನ್ನು ಮುಂಚಿತವಾಗಿ ಕಾಯ್ದಿರಿಸದಂತೆ ಪಾಕಿಸ್ತಾನಿ ಅಧಿಕಾರಿಗಳು ಸೂಚಿಸಿದ್ದಾರೆ.
ಅಫ್ಗಾನ್ನಿಂದ ಇಸ್ಲಾಮಾಬಾದ್ ಮೂಲಕ ಸಾಗುವ ವಿಮಾನಗಳಲ್ಲಿ ಆಗಮಿಸುವ ವಿದೇಶಿ ಅತಿಥಿಗಳಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ 21 ದಿನಗಳವರೆಗೆ ಇತರರಿಗೆ ಯಾವುದೇ ಕೊಠಡಿಗಳನ್ನು ಕಾಯ್ದಿರಿಸದಂತೆ ಹೋಟೆಲ್ಗಳ ಆಡಳಿತಕ್ಕೆ ಅಧಿಕಾರಿಗಳು ಸೂಚನೆ ನೀಡಿದ್ದಾರೆ.
"ಪ್ರಕ್ರಿಯೆಯ ಸಂದರ್ಭ, ಈಗಾಗಲೇ ಹೋಟೆಲ್ನಲ್ಲಿ ಉಳಿದಿರುವ ಅತಿಥಿಗಳಿಗೆ ತೊಂದರೆ ಆಗಬಾರದು" ಎಂದು ತಿಳಿಸಿದ್ದಾರೆ.
ಅಫ್ಗಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುರುವಾರ ಆತ್ಮಾಹುತಿ ಬಾಂಬ್ ದಾಳಿ ನಡೆದಿದ್ದು, ಪಾಕಿಸ್ತಾನ ಇದರ ಬೆನ್ನಲ್ಲೇ ಈ ಕ್ರಮ ತೆಗೆದುಕೊಂಡಿದೆ.