ಕಾಬೂಲ್, ಆ.27 (DaijiworldNews/HR): ಅಫ್ಗಾನಿಸ್ತಾನದಲ್ಲಿರುವ ವಿದೇಶಿಯರನ್ನು ದೇಶ ತೊರೆಯಲು ನೀಡಲಾಗಿರುವ ಗಡುವನ್ನು ಯಾವುದೇ ಕಾರಣಕ್ಕೂ ವಿಸ್ತರಿಸುವುದಿಲ್ಲ ಎಂದು ತಾಲಿಬಾನ್ ಸ್ಪಷ್ಟಪಡಿಸಿದೆ.
ವಿದೇಶಿಗರನ್ನು ಅಫ್ಗಾನಿಸ್ತಾನದಿಂದ ತೆರವುಗೊಳಿಸುವ ಕಾರ್ಯ ಸಾಗುತ್ತಿದ್ದು, ಇತ್ತ ಕಾಬೂಲ್ನ ಹಮೀದ್ ಕರ್ಜೈ ವಿಮಾನ ನಿಲ್ದಾಣದಲ್ಲಿ ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಿಂದ ಬಿಗುವಿನ ಸನ್ನಿವೇಶಕ್ಕೆ ನಿರ್ಮಾಣವಾಗಿದೆ.
ಇನ್ನು ಕಾಬೂಲ್ನಲ್ಲಿ ಇಸ್ಲಾಮಿಕ್ ಸ್ಟೇಟ್ ಜಾಲದ ಅಸ್ತಿತ್ವದ ಬಗ್ಗೆ ತಾಲಿಬಾನ್ ನಾಯಕರು ತನಿಖೆ ನಡೆಸಬೇಕು. ಇಸ್ಲಾಮಿಕ್ ಸ್ಟೇಟ್ ಉಗ್ರರು ಇತ್ತೀಚಿನ ವಾರಗಳಲ್ಲಿ ಸಾವಿರಾರು ಬಂಧಿತರನ್ನು ಜೈಲಿನಿಂದ ಹೊರಗೆ ತಂದಿದ್ದಾರೆ ಎಂದು ನ್ಯಾಟೋ ರಾಯಭಾರಿ ತಿಳಿಸಿದ್ದಾರೆ.