ಕಬೂಲ್, ಆ 28 (DaijiworldNews/MS): ಕಾಬೂಲ್ ವಿಮಾನ ನಿಲ್ದಾಣ ಬಳಿ ನಡೆದ ಬಾಂಬ್ ದಾಳಿಯಲ್ಲಿ ಸೈನಿಕರನ್ನು ಕಳೆದುಕೊಂಡಿದ್ದ ಅಮೆರಿಕ, ಇದರ ಪ್ರತೀಕಾರವಾಗಿ ಅಫ್ಘಾನಿಸ್ತಾನದ ನಂಗಾಹರ್ ಪ್ರಾಂತ್ಯದ ಐಸಿಸ್ -ಖೊರಸಾನ್ ಅಡಗುತಾಣಗಳ ಮೇಲೆ ಏರ್ ಸ್ಟ್ರೈಕ್ ನಡೆಸಿದೆ.
ಉಗ್ರರ ಅಡಗು ತಾಣಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ವಾಯಸೇನೆಯಿಂದ ಡ್ರೋನ್ ದಾಳಿ ಮಾಡಲಾಗಿದೆ. 13 ಸೈನಿಕರನ್ನು ಕಳೆದುಕೊಂಡಿದ್ದ ಅಮೆರಿಕ, ಕಾಬೂಲ್ ವಿಮಾನ ನಿಲ್ದಾಣದ ಬಾಂಬ್ ದಾಳಿಯಲ್ಲಿ ತನ್ನ 13 ಸೈನಿಕರನ್ನು ಕಳೆದುಕೊಂಡಿದ್ದ ಅಮೆರಿಕ, ಪ್ರತಿಕಾರವಾಗಿ ಘಟನೆ ನಡೆದು 36 ಗಂಟೆಯೊಳಗೆ ಸೇಡು ತೀರಿಸಿಕೊಂಡಿದೆ.
ಅಫ್ಘಾನಿಸ್ತಾನದ ನಂಗಾಹರ್ ಪ್ರಾಂತ್ಯದಲ್ಲಿರುವ ಐಸಿಸ್-ಕೆ ತಾಣದ ಮೇಲೆ ನಮ್ಮ ಸೇನೆಯು ವಾಯುದಾಳಿ ನಡೆಸಿದೆ ಎಂದು ಅಮೆರಿಕ ಸೇನೆಯ ವಕ್ತಾರ ನೇವಿ ಕ್ಯಾಪ್ಟನ್ ಬಿಲ್ ಅರ್ಬನ್ ಹೇಳಿದ್ದಾರೆ. ನಾವು ಗುರಿ ಸಾಧಿಸಿದ್ದೇವೆ, ಈ ದಾಳಿಯಲ್ಲಿ ಯಾವುದೇ ನಾಗರಿಕ ಸಾವನ್ನಪ್ಪಿಲ್ಲ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ನಿಂದ ಮಾಹಿತಿ ನೀಡಲಾಗಿದೆ.
ಆತ್ಮಹುತಿ ದಾಳಿಯ ಹೊಣೆಯನ್ನು ಐಸಿಸ್ ಹೊತ್ತುಕೊಂಡಿತ್ತು. ಇದಕ್ಕೆ ಸಂಬಂಧಿಸಿದಂತೆ ನಮ್ಮ ವಿರುದ್ಧ ದಾಳಿ ಮಾಡಿದವರನ್ನು ಕ್ಷಮಿಸುವ ಪ್ರಶ್ನೆಯೇ ಇಲ್ಲ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಉಗ್ರ ಸಂಘಟನೆಗೆ ಖಡಕ್ ಎಚ್ಚರಿಕೆ ನೀಡಿದ್ದರು.