ಕಾಬೂಲ್, 29 (DaijiworldNews/HR): ಕಾಬೂಲ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಅಮೇರಿಕಾದ ಅಂತಿಮ ಅನುಮತಿಗಾಗಿ ಕಾಯುತ್ತಿದ್ದೇವೆ ಎಂದು ತಾಲಿಬಾನ್ ಹೇಳಿರುವುದಾಗಿ ವರದಿಯಾಗಿದೆ.
ಸಾಂದರ್ಭಿಕ ಚಿತ್ರ
ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳು ಸೇರಿದಂತೆ ಬಹುತೇಕ ದೇಶಗಳು ಅಫ್ಗಾನಿಸ್ತಾನದಿಂದ ತೆರವು ಕಾರ್ಯಾಚರಣೆಯನ್ನು ಅಂತಿಮಗೊಳಿಸುವ ಹಂತದಲ್ಲಿದ್ದು, ಬ್ರಿಟನ್ ಮತ್ತು ಇಟಲಿ ತೆರವು ಕಾರ್ಯಾಚರಣೆ ಪೂರ್ಣಗೊಳಿಸಿವೆ. ಅಮೆರಿಕವೂ ಬಾಕಿ ಉಳಿದಿರುವ ಯೋಧರನ್ನು ತ್ವರಿತವಾಗಿ ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿದ್ದು, ವಿಮಾನ ನಿಲ್ದಾಣದ ಹಸ್ತಾಂತರಕ್ಕೆ ಕಾಯುತ್ತಿರುವುದಾಗಿ ತಾಲಿಬಾನ್ ಹೇಳಿದೆ.
ಇನ್ನು ನಮ್ಮ ತಾಂತ್ರಿಕ ತಜ್ಞರ ತಂಡ ವಿಮಾನ ನಿಲ್ದಾಣವನ್ನು ಮುನ್ನಡೆಸಲು ಸಿದ್ಧವಾಗಿದ್ದು, ಇನ್ನೂ ಅನೇಕ ಮಂದಿ ವಿಮಾನ ನಿಲ್ದಾಣದ ಒಳಗೆ ಸ್ಥಳಾಂತರಕ್ಕಾಗಿ ಕಾಯುತ್ತಿದ್ದಾರೆ ಎಂದು ತಾಲಿಬಾನ್ನ ಅಧಿಕಾರಿಯೊಬ್ಬರು ಹೇಳಿದ್ದಾರೆ.