ಕಾಬೂಲ್ ,ಆ 30 (DaijiworldNews/MS):ಕಾಬೂಲ್ನಲ್ಲಿ ವಾಹನವೊಂದರ ಮೇಲೆ ಅಮೆರಿಕ ಸೇನಾ ಪಡೆಗಳು ಡ್ರೋನ್ ಸ್ಟ್ರೈಕ್ ನಡೆಸಿದೆ. ವಿಮಾನ ನಿಲ್ದಾಣದ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿರುವ ಶಂಕಿತ ಆತ್ಮಾಹುತಿ ಕಾರ್ ಬಾಂಬರ್ ಅನ್ನು ಹತ್ಯೆಗೈದಿದ್ದಾರೆ ಎಂದು ಅಮೆರಿಕ ಹೇಳಿದ್ದು, ಆದರೆ ಈ ಘಟನೆಯಲ್ಲಿ ಅಪ್ಘಾನ್ ನಾಗರೀಕರಾದ ಮೂವರು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಬಹಿರಂಗಗೊಂಡಿದೆ.
ಅಮೆರಿಕ ಸೇನಾ ಪಡೆಗಳ ಮಾಹಿತಿಯಂತೆ ವಿಮಾನ ನಿಲ್ದಾಣದತ್ತ ಸಾಗುತ್ತಿದ್ದ ವಾಹನದಲ್ಲಿ ಬೃಹತ್ ಪ್ರಮಾಣದ ಸ್ಫೋಟಕಗಳಿದ್ದವು ಹಾಗೂ ಈ ಮೂಲಕ ವಿಮಾನ ನಿಲ್ದಾಣದಕ್ಕೆ ಅಪಾಯ ತಂದೊಡ್ಡುವ ಸಂಚನ್ನು ಐಎಸ್ಐಎಸ್-ಕೆ ರೂಪಿಸಿತ್ತು. ಆದರೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಐಸಿಸ್-ಕೆ ಬೆದರಿಕೆಯನ್ನು ನಾವು ತಡೆದಿದ್ದೇವೆ ಎಂದು ಹೇಳಿದ್ದಾರೆ.
ಡ್ರೋನ್ ಸ್ಟ್ರೈಕ್ ವೇಳೆ ಉಂಟಾಗಿರುವ ದಾಳಿಯ ಪರಿಣಾಮಗಳ ಬಗ್ಗೆ ಅಮೆರಿಕದ ಕೇಂದ್ರ ಕಮಾಂಡ್ ನ ವಕ್ತಾರ ಕ್ಯಾಪ್ಟನ್ ಬಿಲ್ ಅರ್ಬನ್, ವಾಹನದ ಮೇಲೆ ಡ್ರೋನ್ ದಾಳಿ ನಡೆದ ಬಳಿಕ ಉಂಟಾಗಿರಬಹುದಾದ ಸಾವು-ನೋವುಗಳ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ" ಎಂದು ಹೇಳಿದ್ದಾರೆ.
ಇನ್ನೊಂದು ವರದಿ ಪ್ರಕಾರ ಡ್ರೋನ್ ಸ್ಟ್ರೈಕ್ ವೇಳೆ ಮಕ್ಕಳು ಸೇರಿದಂತೆ ಒಂದು ಕುಟುಂಬದ ಒಂಬತ್ತು ಸದಸ್ಯರು ಸತ್ತಿದ್ದಾರೆ ವರದಿಯಾಗಿದೆ.
"ಈ ದಾಳಿಯಲ್ಲಿ ಒಂದು ವೇಳೆ ಅಮಾಯಕ ಜೀವಗಳಿಗೆ ಹಾನಿಯಾಗಿದ್ದಲ್ಲಿ ಅಮೆರಿಕ ಅದಕ್ಕಾಗಿ ತೀವ್ರವಾಗಿ ದುಃಖಿಸುತ್ತದೆ" ಎಂದು ಹೇಳಿದ್ದಾರೆ. "ದಾಳಿಯ ನಂತರ ಏನಾಗಿದೆ ಎಂಬ ಬಗ್ಗೆ ಸ್ಪಷ್ಟತೆ ಇನ್ನೂ ಸಿಕ್ಕಿಲ್ಲ, ತನಿಖೆ ಪ್ರಗತಿಯಲ್ಲಿದೆ" ಎಂದಷ್ಟೇ ಅರ್ಬನ್ ಮಾಹಿತಿ ನೀಡಿದ್ದಾರೆ.