ಲಾಹೋರ್, ಆ.31 (DaijiworldNews/HR): ಪಾಕಿಸ್ತಾನಕ್ಕೆ ಅಕ್ರಮವಾಗಿ ಪ್ರವೇಶಿಸಿದ್ದಕ್ಕಾಗಿ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ಎರಡು ಜನ ಭಾರತೀಯರನ್ನು ಪಾಕಿಸ್ತಾನವು ಭಾರತದ ಗಡಿ ಭದ್ರತಾ ಪಡೆಗೆ ಹಸ್ತಾಂತರಿಸಿದೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವಿನ ವಾಘಾ ಗಡಿ
2013ರಲ್ಲಿ ಶರ್ಮಾ ರಜಪೂತ್ ಮತ್ತು ರಾಮ್ ಬುಹಾದಾರ್ ಎಂಬವರು ಕಾಶ್ಮೀರದ ಎಲ್ಒಸಿ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಿದ್ದರು.
ಈ ಇಬ್ಬರು ಭಾರತೀಯರು ಬುದ್ದಿಮಾಂದ್ಯರಾಗಿದ್ದು, ಅಜಾಗರೂಕತೆಯಿಂದ ಗಡಿಯನ್ನು ದಾಟಿದ್ದಾರೆ ಎಂಬುದು ನಂತರದಲ್ಲಿ ತನಿಖೆ ವೇಳೆ ತಿಳಿದುಬಂದಿದೆ.
ಇನ್ನು ಅವರಿಬ್ಬರ ಫೋಟೋಗಳನ್ನು ಭಾರತದೊಂದಿಗೆ ಹಂಚಿಕೊಳ್ಳಲಾಗಿದ್ದು, ಭಾರತವು ಅವರ ಗುರುತನ್ನು ದೃಢೀಕರಿಸಿದ ಬಳಿಕ ಪಾಕಿಸ್ತಾನ ಸರ್ಕಾರವು ಸೋಮವಾರ ಅವರಿಬ್ಬರನ್ನು ವಾಘಾ ಗಡಿಯಲ್ಲಿ ಭಾರತಕ್ಕೆ ಹಸ್ತಾಂತರಿಸಿತು ಎಂದು ಅವರು ಹೇಳಿದ್ದಾರೆ.