ದುಬೈ, ಆ 31 (DaijiworldNews/PY): ನೈರುತ್ಯ ಅರೇಬಿಯಾದ ವಿಮಾನ ನಿಲ್ದಾಣವನ್ನು ಗುರಿಯಾಗಿಸಿಕೊಂಡು ಸಿಡಿ ಮದ್ದು ತುಂಬಿದ್ದ ಡ್ರೋನ್ ದಾಳಿ ನಡೆದ ಪರಿಣಾಮ, ಎಂಟು ಮಂದಿ ಗಾಯಗೊಂಡಿದ್ದು, ಪ್ರಯಾಣಿಕ ವಿಮಾನ ಹಾನಿಗೊಂಡಿದೆ.
ಸಾಂದರ್ಭಿಕ ಚಿತ್ರ
ಕಳೆದ 24 ಗಂಟೆಗಳಲ್ಲಿ ಅಬಾ ವಿಮಾನ ನಿಲ್ದಾಣದ ಮೇಲೆ ನಡೆದ ಎರಡನೇ ದಾಳಿ ಇದಾಗಿದ್ದು, ಈ ದಾಳಿ ಹೊಣೆಯನ್ನು ಯಾವುದೇ ಸಂಘಟನೆ ಹೊತ್ತುಕೊಂಡಿಲ್ಲ.
ಈ ಹಿಂದಿನ ದಾಳಿಯಲ್ಲಿಯೂ ಯಾವುದೇ ಸಾವು-ನೋವು ಸಂಭವಿಸಿಲ್ಲ. ಯೆಮೆನ್ನಲ್ಲಿ ಇರಾನ್ ಬೆಂಬಲಿತ ಶಿಯಾ ಬಂಡುಕೋರರ ವಿರುದ್ದ ಹೋರಾಡುತ್ತಿರುವ ಸೌದಿ ನೇತೃತ್ವದ ಮಿಲಿಟರಿ ಒಕ್ಕೂಟವು ದಾಳಿಯ ಕುರಿತು ವಿವರಿಸಿಲ್ಲ.
ಯೆಮೆನ್ ನ ಹೌತಿ ಬಂಡಾಯದವರು 2015ರಿಂದಲೂ ಸೌದಿ ವಿರುದ್ದ ಯುದ್ಧದಲ್ಲಿ ತೊಡಗಿದ್ದು, ಹಲವು ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳು ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿವೆ.