ಪಂಜ್ಶಿರ್ , ಸೆ 01(DaijiworldNews/MS): ಪಂಜ್ ಶೀರ್ ನ ಸೈನಿಕರು 41 ತಾಲಿಬಾನ್ ಭಯೋತ್ಪಾದಕರನ್ನುಹೊಡೆದುರುಳಿಸಿದ್ದು, 20 ಮಂದಿಯನ್ನು ಉಗ್ರರನ್ನು ಪಂಜ್ಶಿರ್ ಕಣಿವೆಯಲ್ಲಿ ತಾಲಿಬಾನ್ ಪ್ರತಿರೋಧ ಪಡೆಗಳು(ಎನ್ಆರ್ಎಫ್) ಸೆರೆಹಿಡಿದಿದ್ದಾರೆ.
ಖವಾಕ್ ಪಾಸ್ ಬಳಿ ತಾಲಿಬಾನ್ ಕಣಿವೆಯೊಳಗೆ ನುಸುಳಲು ಯತ್ನಿಸಿದಾಗ ಈ ದಾಳಿ ನಡೆದಿದೆ. ಎನ್ಆರ್ಎಫ್ ದಾಳಿಯನ್ನು ಯಶಸ್ವಿಯಾಗಿ ಎದುರಿಸಲು ಮತ್ತು 41 ತಾಲಿಬಾನ್ ಭಯೋತ್ಪಾದಕರನ್ನು ನಿರ್ನಾಮ ಮಾಡಲು ಯಶಸ್ವಿಯಾಯಿತು. ಇತರರನ್ನು ಸೆರೆಹಿಡಿದು ಕೈದಿಗಳಾಗಿ ಮಾಡಲಾಗಿದೆ.
ಅಂಡರಾಬ್ನ ಪೋಲ್ಸಾರ್ನ ಗಾಜಾ ವಿಭಾಗದಲ್ಲಿ ಮತ್ತೊಂದು ಗೆರಿಲ್ಲಾ ಹೊಂಚುದಾಳಿಯಲ್ಲಿ, 34 ತಾಲಿಬಾನ್ ಹೋರಾಟಗಾರರು ಲೇಸರ್ ಪೀಸ್ ನಿಂದ ಹತರಾದರು. ಇದರೊಂದಿಗೆ, ಕಳೆದ 24 ಗಂಟೆಗಳಲ್ಲಿ ಅಂಡರಾಬ್ ಜಿಲ್ಲೆಗಳಲ್ಲಿ ತಾಲಿಬಾನ್ ಭಾರೀ ಸಾವುನೋವುಗಳನ್ನು ಅನುಭವಿಸಿದೆ.
ಈ ಬಗ್ಗೆತಾಇಬಾನ್ ವಿರೋದಿ ಹೋರಾಟಗಾರ ಅಫ್ಘಾನಿಸ್ತಾನದ ನಾರ್ದರ್ನ್ ಅಲೈಯನ್ಸ್ ಕಮಾಂಡರ್ ಹಸಿಬ್, "ನಾವು ನಿಮ್ಮನ್ನು ಕಣಿವೆಗೆ ಪ್ರವೇಶಿಸಲು ಬಿಡುತ್ತೇವೆ ಆದರೆ (ನಿಮ್ಮನ್ನು) ಹೊರಗೆ ಬಿಡುವುದಿಲ್ಲ" ಎಂದು ಹೇಳಿದ್ದು ಎರಡು ಕಡೆ ಅಪಾರ ಸಾವು ನೋವು ಉಂಟಾಗಿರುವ ಬಗ್ಗೆ ಸ್ಪಷ್ಟಪಡಿಸಿದ್ದಾರೆ.