ಕಾಬೂಲ್, ಸೆ. 01 (DaijiworldNews/PY): ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ತಾಲಿಬಾನ್ಗೆ ಆಲ್ ಖೈದಾ ಸಂಘಟನೆ ಅಭಿನಂದನೆ ಸಲ್ಲಿಸಿದ್ದು, ಕಾಶ್ಮೀರವನ್ನು ಕೂಡಾ ಸ್ವತಂತ್ರಗೊಳಿಸಬೇಕು ಎಂದು ಕರೆ ನೀಡಿರುವುದಾಗಿ ವರದಿ ಹೇಳಿದೆ.
ಅಮೇರಿಕಾ ಸೇನಾಪಡೆಯು ಅಫ್ಗಾನಿಸ್ತಾನದಿಂದ ಸಂಪೂರ್ಣವಾಗಿ ನಿರ್ಗಮನವಾದ ಬಳಿಕ ಆಲ್ ಖೈದಾ ಉಗ್ರಗಾಮಿ ಸಂಘಟನೆ ತನ್ನ ಪ್ರಕಟಣೆಯಲ್ಲಿ, ಸೋಮಾಲಿಯಾ ಸೇರಿದಂತೆ ಲೆವಾಂಟ್, ಯೆಮೆನ್, ಕಾಶ್ಮೀರ ಹಾಗೂ ಇತರ ಪ್ರದೇಶಗಳನ್ನು ಇಸ್ಲಾಂ ಶತ್ರುಗಳ ಹಿಡಿತದಿಂದ ಮುಕ್ತಗೊಳಿಸಿ. ಓ ಅಲ್ಲಾ.. ವಿಶ್ವದಾದ್ಯಂತ ಮುಸ್ಲಿಂ ಕೈದಿಗಳಿಗೆ ಸ್ವಾತಂತ್ರ್ಯ ನೀಡಿ ಎಂದು ಹೇಳಿರುವುದಾಗಿ ವರದಿ ತಿಳಿಸಿದೆ.
ಯುಎಸ್ ಪಡೆಗಳನ್ನು ಹಿಂತೆಗೆದುಕೊಂಡ ನಂತರ ಅಫ್ಘಾನಿಸ್ತಾನವು ಸಂಪೂರ್ಣ ಸ್ವಾತಂತ್ರ್ಯವನ್ನು ಪಡೆದುಕೊಂಡಿದೆ ಎಂದು ತಾಲಿಬಾನ್ ಘೋಷಿಸಿದ ಕೆಲವೇ ಗಂಟೆಗಳಲ್ಲಿ ಅಲ್-ಕೈದಾ ವಿವರವಾದ ಹೇಳಿಕೆಯನ್ನು ನೀಡಿದೆ ಎಂದು ವರದಿ ಹೇಳಿದೆ.
ಆ.30ರಂದು 12 ಗಂಟೆಗೆ ಅಮೇರಿಕಾದ ಸೇನಾಪಡೆಗಳನ್ನು ಸಿ.17 ಕಾರ್ಗೋ ವಿಮಾನ ಕಾಬೂಲ್ನಲ್ಲಿರುವ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗುವ ಮೂಲಕ ಅಮೇರಿಕಾದ ದೀರ್ಘ ಕಾಲದ ಯುದ್ದ ಕೊನೆಯಾದಂತಾಗಿದೆ.
9/11 ದಾಳಿಯ ನಂತರ ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರದಿಂದ ಹೊರಹಾಕಲ್ಪಟ್ಟಿದ್ದು, ಈಗ ಇಡೀ ಅಫ್ಗಾನಿಸ್ತಾನದ ಮೇಲೆ ನಿಯಂತ್ರಣ ಸಾಧಿಸಿದೆ. ಉತ್ತರ ಅಫ್ಗಾನಿಸ್ತಾನದ ಪಂಜ್ಶಿರ್ ಕಣಿವೆಯಲ್ಲಿ ತಾಲಿಬಾನ್ ವಿರೋಧಿ ಪಡೆಗಳ ಗುಂಪು ಇನ್ನೂ ಪ್ರತಿರೋಧವನ್ನು ಎದುರಿಸುತ್ತಿದೆ ಎಂದು ವರದಿ ಹೇಳಿದೆ.
ಇದು ಹೊಸ ಪ್ರಪಂಚ. ಇರಾಕ್ ಹಾಗೂ ಆಫ್ರಿಕಾ ಮತ್ತು ಏಷ್ಯಾದಾದ್ಯಂತ ತಮ್ಮ ಅಸ್ತಿತ್ವವನ್ನು ಸ್ಥಾಪಿಸಲು ಮುಂದಾಗಿರುವುದಾಗಿ ಅಮೇರಿಕಾ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ.