ಕಾಬೂಲ್, ಸ.04 (DaijiworldNews/HR): ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆಯನ್ನು ಮುಂದಿನ ವಾರಕ್ಕೆ ಮುಂದೂಡಲಾಗಿದೆ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಸರ್ಕಾರಕ್ಕೆ ವಿಶಾಲ ಚಿಂತನೆ ಮತ್ತು ಅಂತರರಾಷ್ಟ್ರೀಯ ಸಮುದಾಯ ಒಪ್ಪುವಂತಹ ರೂಪ ನೀಡುವಲ್ಲಿ ತಾಲಿಬಾನ್ ಶ್ರಮಿಸುತ್ತಿದೆ" ಎಂದಿದ್ದಾರೆ.
ಇನ್ನು ತಾಲಿಬಾನ್ ಉಗ್ರರು ಇಂದು ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆಯನ್ನು ಘೋಷಿಸುವ ನಿರೀಕ್ಷೆ ಇತ್ತು, ಸಂಘಟನೆಯ ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದರ್ ಸರ್ಕಾರದ ನೇತೃತ್ವ ವಹಿಸುವ ಸಾಧ್ಯತೆ ಇತ್ತು.
ಆಗಸ್ಟ್ 15 ರಂದು ಕಾಬೂಲ್ ಅನ್ನು ವಶಪಡಿಸಿಕೊಂಡ ನಂತರ ತಾಲಿಬಾನ್ಗಳು ಹೊಸ ಸರ್ಕಾರ ರಚನೆ ಘೋಷಣೆಯನ್ನು ಎರಡನೇ ಬಾರಿಗೆ ಮುಂದೂಡಿದ್ದಾರೆ.