ವಾಷಿಂಗ್ಟನ್, ಸೆ. 04 (DaijiworldNews/PY): "ಈ ವರ್ಷದ ನವೆಂಬರ್ನಲ್ಲಿ ಭಾರತದ ಹಾಗೂ ಅಮೇರಿಕಾದ ನಡುವಿನ ನಾಲ್ಕನೇ ವಾರ್ಷಿಕ 2+2 ಮಾತುಕತೆ ವಾಷಿಂಗ್ಟನ್ನಲ್ಲಿ ನಡೆಯಲಿದೆ" ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶೃಂಗ್ಲಾ ಹೇಳಿದ್ದಾರೆ.
"ಈ ಅವಕಾಶವನ್ನು ನಾವು ಜಂಟಿ ಕಾರ್ಯದರ್ಶಿ ಮಟ್ಟದಲ್ಲಿ 2+2 ಆಂತರಿಕ ಅಧಿವೇಶನದ ಸಭೆ ನಡೆಸಲು ಬಳಸಿಕೊಂಡಿದ್ದೇವೆ" ಎಂದಿದ್ದಾರೆ.
"ನಾವು ನವೆಂಬರ್ನಲ್ಲಿ ನಡೆಯುವ ಈ ಮಾತುಕತೆಯನ್ನು ಎದುರು ನೋಡುತ್ತೇವೆ. ಮಾತುಕತೆಗೆ ಇನ್ನೂ ನಿಖರ ದಿನಾಂಕಗಳು ನಿಗದಿಯಾಗಿಲ್ಲ" ಎಂದು ಹೇಳಿದ್ಧಾರೆ.
ಎರಡೂ ಕಡೆಯ ವಿದೇಶಾಂಗ ಹಾಗೂ ರಕ್ಷಣಾ ಸಚಿವರ ಮಧ್ಯೆ 2+2 ಮಾತುಕತೆ ನಡೆಯಲಿದೆ. ಮೊದಲ 2+2 ಮಾತುಕತೆ 2018ರಲ್ಲಿ ನವದೆಹಲಿಯಲ್ಲಿ ನಡೆದಿತ್ತು. ಈ ಹಿಂದೆಯೂ 2+2 ಮಾತುಕತೆ ನವದೆಹಲಿಯಲ್ಲಿ ನಡೆದಿತ್ತು. ಮುಂದಿನ ಸಭೆಯನ್ನು ಅಮೇರಿಕಾದ ವಾಷಿಂಗ್ಟನ್ನಲ್ಲಿ ಆಯೋಜಿಸಲಾಗಿದೆ.