ಇಸ್ಲಾಮಾಬಾದ್, ಸೆ. 05 (DaijiworldNews/PY): "ಅಫ್ಗಾನಿಸ್ತಾನದಲ್ಲಿ ಅಂತರ್ಗತ ಆಡಳಿತವನ್ನು ಸ್ಥಾಪಿಸಲು ತಾಲಿಬಾನ್ಗಳಿಗೆ ಇಸ್ಲಾಮಾಬಾದ್ ಸಹಾಯ ಮಾಡುತ್ತದೆ" ಎಂದು ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಾಜ್ವಾ ಅವರು ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರಿಗೆ ತಿಳಿಸಿದ್ದಾರೆ.
ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಅವರೊಂದಿಗೆ ಕಮರ್ ಜಾವೇದ್ ಬಾಜ್ವಾ ಅವರು ಅಫ್ಗಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯ ಕುರಿತು ಚರ್ಚೆ ನಡೆಸಿದರು.
"ಅಫ್ಗಾನ್ನಲ್ಲಿ ಶಾಂತಿ ಹಾಗೂ ಸ್ಥಿರತೆಗಾಗಿ ಪಾಕಿಸ್ತಾನ ಹೋರಾಡುತ್ತಿರುತ್ತದೆ. ಇದರೊಂದಿಗೆ ಅಂತರ್ಗತ ಆಡಳಿತ ರಚನೆಗೆ ಕೂಡಾ ಸಹಾಯ ಮಾಡುತ್ತದೆ" ಎಂದು ಬಾಜ್ವಾ ತಿಳಿಸಿದ್ದಾರೆ ಎಂದು ಪಾಕಿಸ್ತಾನದ ಪತ್ರಿಕೆಯೊಂದು ವರದಿ ಮಾಡಿದೆ.
ಅಂತರಾಷ್ಟ್ರೀಯ ಸಮುದಾಯ ಒಪ್ಪುವಂತ ವಿಶಾಲ ಆಧಾರಿತ ಹಾಗೂ ಅಂತರ್ಗತ ಆಡಳಿತಕ್ಕೆ ರೂಪ ನೀಡಲು ಹೆಣಗಾಡುತ್ತಿರುವ ಹಿನ್ನೆಲೆ ಅಫ್ಗಾನಿಸ್ತಾನದಲ್ಲಿ ಹೊಸ ಸರ್ಕಾರ ರಚನೆ ಪ್ರಕ್ರಿಯೆಯನ್ನು ಮುಂದಿನ ವಾರಕ್ಕೆ ಮುಂದೂಡಿದೆ.