ಕಾಬೂಲ್ , ಸೆ 06 (DaijiworldNews/MS): ಪಂಜಶಿರ್ ಹೋರಾಟ, ಅಥವಾ ತಾಲಿಬಾನ್ಗೆ ಪ್ರತಿರೋಧ ಚಳುವಳಿಯನ್ನು ಮುನ್ನಡೆಸುತ್ತಿರುವ ಅಹ್ಮದ್ ಮಸೂದ್ನ ವಕ್ತಾರ ಫಹೀಮ್ ದಷ್ಟಿ ಭಾನುವಾರ ಪಂಜ್ಶಿರ್ನಲ್ಲಿ ತಾಲಿಬಾನ್ನೊಂದಿಗೆ ಹೋರಾಡುವಾಗ ಅಸುನೀಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿಗಳು ತಿಳಿಸಿವೆ.
ಅಫ್ಘಾನಿಸ್ತಾನದ ನ್ಯಾಷನಲ್ ರೆಸಿಸ್ಟೆನ್ಸ್ ಫ್ರಂಟ್ನ ಫೇಸ್ಬುಕ್ ಪುಟದಲ್ಲಿ ಪೋಸ್ಟ್ ಹಾಕಿದ್ದು "ನಾವು ಇಂದು ಇಬ್ಬರು ಆತ್ಮೀಯ ಸಹೋದರರು ಮತ್ತು ಸಹೋದ್ಯೋಗಿಗಳು ಮತ್ತು ಹೋರಾಟಗಾರರನ್ನು ಕಳೆದುಕೊಂಡೆವು ಎಂದು ವಿಷಾದದಿಂದ ಹೇಳುತ್ತೇವೆ . ಈ ಬಗ್ಗೆ ತುಂಬ ನೋವಾಗುತ್ತಿದೆ. ಹುತಾತ್ಮರಿಗೆ ಅಭಿನಂದನೆಗಳು ಎಂದು ವಿವರಿಸಿದೆ.
ಅಮಿರ್ ಸಾಹೇಬ್ ಅಹ್ಮದ್ ಮಸೂದ್ ಅವರ ಕಚೇರಿಯ ವಕ್ತಾರನಾಗಿದ್ದ ಫಾಹಿಮ್ ದಷ್ಟಿ ಮತ್ತು ಜನರಲ್ ಸಾಹಿಬ್ ಅಬ್ದುಲ್ ವಡೂದ್ ಝೋರ್ ಅವರು ಹುತಾತ್ಮರಾಗಿದ್ದಾರೆ ಎಂದು ಹೇಳಿದೆ.
ಅಫ್ಘಾನಿಸ್ತಾನ ಪತ್ರಕರ್ತ ಫ್ರೆಡ್ ಬೆಜಾನ್ ಕೂಡ ಫಾಹಿಮ್ ದಷ್ಟಿ ಸಾವಿನ ಬಗ್ಗೆ ಟ್ವೀಟ್ ಮಾಡಿದ್ದಾರೆ. ತಾಲಿಬಾನಿಗಳ ದಾಳಿಗೆ ಪಂಜಶಿರ್ ಹೋರಾಟ ಪಡೆಯ ವಕ್ತಾರ ಫಾಹಿಮ್ ದಷ್ಟಿ ಸೇರಿ ಮೂವರು ಪ್ರಮುಖ ನಾಯಕರು ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ. ಇದು ಪಂಜಶಿರ್ ಪ್ರತಿರೋದಕ ಪಡೆಗೆ ದೊಡ್ಡ ಹೊಡೆತ ಎಂದು ಹೇಳಿದ್ದಾರೆ.