ಕಾಬೂಲ್, ಸೆ. 06 (DaijiworldNews/PY): ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ತಾಲಿಬಾನ್ ಅಟ್ಟಹಾಸ ಮುಂದುವರಿದಿದ್ದು, 8 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿಯನ್ನು ಪತಿ, ಮಕ್ಕಳ ಮುಂದೆಯೇ ಗುಂಡಿಕ್ಕಿ ಕೊಂದಿದ್ದಾರೆ.
ಮೃತಪಟ್ಟ ಮಹಿಳಾ ಪೊಲೀಸ್ ಅಧಿಕಾರಿಯನ್ನು ಬಾನು ನೆಗರ್ ಎಂದು ಗುರುತಿಸಲಾಗಿದೆ. ಅಫ್ಗಾನಿಸ್ತಾನದ ಘೋರ್ ಪ್ರಾಂತ್ಯದ ರಾಜಧಾನಿ ಫಿರೋಜ್ ಕೋಹ್ನ ನಿವಾಸದಲ್ಲಿದ್ದ ಬಾನು ನೆಗರ್ ಅವರನ್ನು ಅವರ ಕುಟುಂಬದರ ಎದುರಲ್ಲೇ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಗನ್ ಹಿಡಿದು ಮನೆಗೆ ನುಗ್ಗಿದ್ದ ತಾಲಿಬಾನಿಗಳು ಮನೆಯವರನ್ನು ಕಟ್ಟಿಹಾಕಿದ್ದು, ಬಳಿಕ ಬಾನು ಅವರ ಮೇಲೆ ಮನಬಂದಂತೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಮಹಿಳಾ ಅಧಿಕಾರಿಯನ್ನು ಹತ್ಯೆ ಮಾಡಿದ ಬಳಿ ತಾಲಿಬಾನಿಗಳು ಆಕೆಯ ಮುಖವನ್ನು ವಿರೂಪಗೊಳಿಸಿದ್ದಾರೆ.
ಅಫ್ಗಾನಿಸ್ತಾನ ತಾಲಿಬಾನಿಗಳ ವಶವಾದ ಬಳಿಕ ತಾವು ಉದಾರವಾದಿಗಳು ಎಂದು ಗುರುತಿಸಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೂ ಕಾಬೂಲ್ನಲ್ಲಿ ಉಗ್ರರು ತಮ್ಮ ವಿರೋಧಿಗಳನ್ನು ಕಂಡ ಕಂಡಲ್ಲಿ ಹತ್ಯೆಗೈಯುತ್ತಿದ್ದಾರೆ.