ಕಾಬೂಲ್, ಸೆ. 07 (DaijiworldNews/PY): ಅಫ್ಗಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ರಚನೆಗೆ ಮುಂದಾಗಿದ್ದು, ಸರ್ಕಾರ ರಚನೆ ಕಾರ್ಯಕ್ರಮಕ್ಕೆ ಆರು ದೇಶಗಳಿಗೆ ತಾಲಿಬಾನ್ ಆಹ್ವಾನ ನೀಡಿದೆ.
ವರದಿಗಳ ಪ್ರಕಾರ, ಪಾಕಿಸ್ತಾನ ಸೇರಿದಂತೆ, ಟರ್ಕಿ, ಚೀನಾ, ರಷ್ಯಾ, ಕತಾರ್ ಹಾಗೂ ಇರಾನ್ ಅನ್ನು ಉದ್ಘಾಟನೆ ಸಮಾರಂಭಕ್ಕೆ ಆಹ್ವಾನಿಸಿದೆ.
ಯುಎಇ ಹಾಗೂ ಸೌದಿ ಅರೇಬಿಯಾ 1990ರಲ್ಲಿ ತಾಲಿಬಾನ್ ಸರ್ಕಾರದೊಂದಿಗೆ ಗುರುತಿಸಿಕೊಂಡಿತ್ತು. ಆದರೆ, ಈ ಬಾರಿ ಅಂತರ ಕಾಯ್ದುಕೊಂಡಿದೆ.
ನೂತನ ಸರ್ಕಾರದಲ್ಲಿ ಪಾಕಿಸ್ತಾನದ ಪ್ರಭಾವಿರುವುವದು ಸ್ಪಷ್ಟವಾಗಿದೆ. ಐಎಸ್ಐ ಮುಖ್ಯಸ್ಥ ಲೆ.ಜ.ಫೈಹ್ ಹಮೀದ್ ಕಾಬೂಲ್ಗೆ ತೆರಳಿ ತಾಲಿಬಾನ್ ನಾಯಕರ ಜೊತೆ ಮಾತುಕತೆ ನಡೆಸಿದ ನಂತರವೇ, ಸರ್ಕಾರದ ಉನ್ನತ ಹುದ್ದೆಗಳಲ್ಲಿ ಬದಲಾವಣೆಯಾಗಿದೆ ಎನ್ನಲಾಗಿದೆ.