ಸ್ಕಾಟಿಯಾ ಸೆ 8 (DaijiworldNews/MS): ಕೆನಡಾದ ನೋವಾ ಸ್ಕಾಟಿಯಾ ಪ್ರಾಂತ್ಯದ ಟ್ರುರೊ ಪಟ್ಟಣದ ಅಪಾರ್ಟ್ಮೆಂಟ್ನಲ್ಲಿ ಭಾರತೀಯ ಮೂಲದ 23 ವರ್ಷದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಜನಾಂಗಿಯ ದ್ವೇಷದಿಂದ ಈ ಕೊಲೆ ನಡೆರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರನ್ನು ಪ್ರಭೋಜತ್ ಸಿಂಗ್ ಕತ್ರಿ ಎಂದು ಗುರುತಿಸಲಾಗಿದೆ.
ಸೆಪ್ಟೆಂಬರ್ 5, 2021 ರ ಭಾನುವಾರ ಮುಂಜಾನೆ 2 ಗಂಟೆಗೆ ವೇಳೆ ಘಟನೆ ಬಗ್ಗೆ ಪೊಲೀಸರಿಗೆ ತಿಳಿದುಬಂದಿದ್ದು, ಕತ್ರಿ ಅವರ ಮೈಮೇಲೆ ಗಾಯದ ಗುರುತುಗಳು ಕಂಡು ಬಂದಿವೆ. ತೀವ್ರ ಗಾಯದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಆತನ ಮೇಲೆ ಕೆಲವರು ಉದ್ದೇಶಪೂರ್ವಕವಾಗಿ ದಾಳಿ ನಡೆಸಿ ಹತ್ಯೆ ನಡೆಸಿರಬಹುದು ಎಂದು ರೋರೊ ನಗರದ ಪೊಲೀಸ್ ಅಧಿಕಾರಿ ಡೇವಿಡ್ ಮ್ಯಾಕ್ನೀಲ್ ತಿಳಿಸಿದ್ದಾರೆ.
ಉನ್ನತ ವಿದ್ಯಾಭ್ಯಾಸಕ್ಕಾಗಿ ಕೆನಡಾಗೆ ಬಂದಿದ್ದ ಕತ್ರಿ ಅತ್ಯುತ್ತಮವಾಗಿ ವ್ಯಾಸಂಗ ಮಾಡುತ್ತಿದ್ದರೂ ಆತನ ವಿರುದ್ಧ ಕೆಲವರು ಜನಾಂಗಿಯ ದ್ವೇಷ ಸಾಧಿಸುತ್ತಿದ್ದರೂ ಅವರೇ ಇವರನ್ನು ಕೊಲೆ ಮಾಡಿರಬಹುದು ಎಂದು ಕತ್ರಿ ಸ್ನೇಹಿತರು ಶಂಕಿಸಿದ್ದಾರೆ.
ಕತ್ರಿ ಅವರು ಲೇಟನ್ನ ಟ್ಯಾಕ್ಸಿ ಹಾಗೂ ಟ್ರೂರೋದಲ್ಲಿ ರೆಸ್ಟೋರೆಂಟ್ಗಳಲ್ಲಿ ಕೆಲಸ ಮಾಡುತ್ತಿದ್ದರು. ಕೊಲೆಗೆ ಸಂಬಂಧಿಸಿದಂತೆ ಒಬ್ಬ ವ್ಯಕ್ತಿಯನ್ನು ಬಂಧಿಸಲಾಯಿತು ಆದರೆ ನಂತರ ಬಿಡುಗಡೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇನ್ನು ಬುಕ್ಕನವಾಲಾ ಗ್ರಾಮದಲ್ಲಿರುವ ಅವರ ಕುಟುಂಬವು ಅವರ ಅಂತ್ಯಕ್ರಿಯೆಗಾಗಿ ಅವರ ಪಾರ್ಥಿವ ಶರೀರವನ್ನು ತರುವಲ್ಲಿ ಸಹಾಯ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದೆ.
ಪ್ರಭುಜೋತ್ ಸಿಂಗ್ಅವರು ನಾಲ್ಕು ವರ್ಷಗಳ ಹಿಂದೆ ಅಧ್ಯಯನ ವೀಸಾದಲ್ಲಿ ಕೆನಡಾಕ್ಕೆ ಹೋಗಿದ್ದರು.