ಇಸ್ಲಾಮಾಬಾದ್,ಸ. 08 (DaijiworldNews/HR): ತಾಲಿಬಾನ್ ಅಫ್ಗಾನಿಸ್ತಾನವನ್ನು ವಶಪಡಿಸಿಕೊಂಡ ಬಳಿಕ ಪಾಕಿಸ್ತಾನವು ಮಹಿಳೆಯರು, ಮಕ್ಕಳು ಸೇರಿದಂತೆ 200 ಅಫ್ಗನ್ ಪ್ರಜೆಗಳನ್ನು ಗಡಿಪಾರು ಮಾಡಿದೆ ಎಂದು ತಿಳಿದು ಬಂದಿದೆ.
ಸಾಂದರ್ಭಿಕ ಚಿತ್ರ
ಪಾಕಿಸ್ತಾನದೊಳಗೆ ಪ್ರವೇಶಿಸಿದ ಅಫ್ಗನ್ ಪ್ರಜೆಗಳು ಚಮನ್ನ ರೈಲ್ವೆ ಸ್ಟೇಷನ್ನಲ್ಲಿ ಕೆಲ ದಿನಗಳ ಕಾಲ ಉಳಿದುಕೊಂಡಿದ್ದು, ಬಳಿಕ ಅಧಿಕಾರಿಗಳು ಅವರನ್ನು ಅಲ್ಲಿಂದ ತೆರಳುವಂತೆ ಸೂಚಿಸಿದ್ದರು ಎಂದು ವರದಿಯಲ್ಲಿ ತಿಳಿಸಲಾಗಿದೆ.
ಇನ್ನು ಎರಡು ದಿನಗಳ ಹಿಂದೆ ಕ್ವೆಟ್ಟಾಗೆ ತಲುಪಿದ ಕುಂದುಜ್ ಪ್ರಾಂತ್ಯದ ಅಫ್ಗನ್ ಪ್ರಜೆಗಳು ಬಲೇಲಿಯಲ್ಲಿ ಉಳಿದುಕೊಂಡಿದ್ದು, ಅಲ್ಲಿನ ಅಧಿಕಾರಿಗಳು ಕೂಡ ಅಫ್ಗನ್ ಪ್ರಜೆಗಳಿಗೆ ಉಳಿಯಲು ಅನುಮತಿ ನಿರಾಕರಿಸಿದರು. ಅಫ್ಗನ್ ನಿರಾಶ್ರಿತರನ್ನು ಕಸ್ಟಡಿಗೆ ತೆಗೆದುಕೊಂಡ ಅಧಿಕಾರಿಗಳು ಅವರನ್ನು ಅಫ್ಗಾನಿಸ್ತಾನಕ್ಕೆ ಗಡಿಪಾರು ಮಾಡಿದ್ದಾರೆ ಎನ್ನಲಾಗಿದೆ.
ಮಹಿಳೆಯರು, ಮಕ್ಕಳು ಸೇರಿದಂತೆ 200 ಅಫ್ಗನ್ ಪ್ರಜೆಗಳನ್ನು ಅವರ ದೇಶಕ್ಕೆ ಗಡಿಪಾರು ಮಾಡಲಾಗಿದೆ ಎಮ್ದು ವರದಿಯಾಗಿದೆ.