ವಾಷಿಂಗ್ಟನ್, ಸೆ 09(DaijiworldNews/MS): ಅಫ್ಘಾನಿಸ್ತಾನದಲ್ಲಿ ಹೊಸ ಮಧ್ಯಂತರ ಸರ್ಕಾರಕ್ಕೆ ಮಾನ್ಯತೆ ನೀಡುವ ಯಾವುದೇ ಧಾವಂತ ನಮಗಿಲ್ಲ ಎಂದು ಅಮೆರಿಕದ ವೈಟ್ ಹೌಸ್ ಬುಧವಾರ ತಿಳಿಸಿದೆ.
ಈ ಆಡಳಿತದಲ್ಲಿ ಯಾರೊಬ್ಬರೂ ಅಧ್ಯಕ್ಷರು ಅಥವಾ ರಾಷ್ಟ್ರೀಯ ಭದ್ರತಾ ತಂಡದಲ್ಲಿ ಯಾವ ತಾಲಿಬಾನರೂ ಕೂಡಾ ಜಾಗತಿಕ ಸಮುದಾಯದ ಗೌರವಾನ್ವಿತ ಮತ್ತು ಮೌಲ್ಯಯುತ ಸದಸ್ಯರೆಂದು ಸೂಚಿಸುವುದಿಲ್ಲ ಮತ್ತು ಅಂತಹ ಗೌರವವನ್ನು ಸಂಪಾದಿಸಿಲ್ಲ. ಇದೊಂದು ಉಸ್ತುವಾರಿ ಸಚಿವ ಸಂಪುಟವಾಗಿದೆ. ಈ ಸಂಪುಟದಲ್ಲಿ ಜೈಲಿನಲ್ಲಿದ್ದ ನಾಲ್ವರು ಮಾಜಿ ತಾಲಿಬಾನಿಗಳು ಸಹ ಇದ್ದಾರೆ’ ಶ್ವೇತ ಭವನದ ಪತ್ರಿಕಾ ಕಾರ್ಯದರ್ಶಿ ಜೆನ್ ಸಾಕಿ ತಿಳಿಸಿದ್ದಾರೆ.
ತಾಲಿಬಾನ್ ಆಡಳಿತವನ್ನು ನಾವು ಮಾನ್ಯ ಮಾಡಿಲ್ಲ. ನಾವು ಮ್ಯಾನತೆ ಮಾಡುವ ಅವಸರವೂ ಇಲ್ಲ. ಅದಕ್ಕಿಂತ ಮುಂಚೆ ಮಾಡಬೇಕಾಗಿರುವುದು ಬಹಳಷ್ಟಿದೆ.ಅಫ್ಗಾನಿಸ್ತಾನ ತಾಲಿಬಾನ್ ನಿಯಂತ್ರಣದಲ್ಲಿರುವುದರಿಂದ ಸಂಪರ್ಕದಲ್ಲಿರುವುದು ಅನಿವಾರ್ಯ. ಅಫ್ಗಾನಿಸ್ತಾನದಲ್ಲಿರುವ ಅಮೆರಿಕ ನಾಗರಿಕರನ್ನು ವಾಪಸ್ ಕರೆತರಲು ತಾಲಿಬಾನ್ ಜತೆ ಮಾತುಕತೆ ನಡೆಸಲಾಗುತ್ತಿದೆ’ ಎಂದು ಅವರು ತಿಳಿಸಿದ್ದಾರೆ.