ವಾಷಿಂಗ್ಟನ್, ಸೆ. 10 (DaijiworldNews/PY): ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರು ಚೀನಾ ಅಧ್ಯಕ್ಷ ಷಿ ಜಿಂಗ್ಪಿನ್ ಅವರೊಂದಿಗೆ ದೂರವಾಣಿಯ ಮೂಲಕ ಮಾತನಾಡಿದ್ದಾರೆ.
ಈ ಬಗ್ಗೆ ಶ್ವೇತಭವನ ಹೇಳಿಕೆ ನೀಡಿದ್ದು, "ಉಭಯ ನಾಯಕರು ಎರಡು ರಾಷ್ಟ್ರಗಳ ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ತೆಗೆದುಕೊಳ್ಳಬೇಕಾಗಿರುವ ಕ್ರಮಗಳ ಹಾಗೂ ಕಾರ್ಯತಂತ್ರಗಳ ಕುರಿತು ಚರ್ಚೆ ನಡೆಸಿದ್ದಾರೆ" ಎಂದು ಹೇಳಿದೆ.
"ಅಮೇರಿಕಾ ಹಾಗೂ ಚೀನಾ ನಡುವಿನ ಸ್ಪರ್ಧೆ ಸಂಘರ್ಷಕ್ಕೆ ತಿರುಗದಂತೆ ನೋಡಿಕೊಳ್ಳಲು ಎಚ್ಚರಿಕೆವಹಿಸಬೇಕು ಎಂದು ಉಭಯ ನಾಯಕರು ಬಯಸಿದ್ದಾರೆ" ಎಂದು ಶ್ವೇತಭವನ ಹೇಳಿದೆ.
"ತಾಲಿಬಾನ್ ಅಫ್ಘಾನಿಸ್ತಾನದಲ್ಲು ಅಧಿಕಾರ ವಹಿಸಿಕೊಂಡ ಬಳಿಕ ಚೀನಾದ ನಿಲುವು ತಾಲಿಬಾನ್ ಆಡಳಿತದ ಪರವಾಗಿದೆ ಎನ್ನುವುದು ಸ್ಪಷ್ಟವಾಗಿತ್ತು. ಅದರೆ, ಚೀನಾ ಹಾಗೂ ಅಮೇರಿಕಾ ಆಡಳಿತದ ಮಧ್ಯೆ ಪ್ರಮುಖವಾದ ಸಮಸ್ಯೆ ಎದುರಾಗಿದೆ" ಎಂದು ಜೋ ಬಿಡೆನ್ ತಿಳಿಸಿದ್ದರು.