ಕಾಬೂಲ್, ಸೆ. 10 (DaijiworldNews/PY): "ಮಹಿಳೆಯರು ಮಕ್ಕಳನ್ನು ಹೆರುವುದಕ್ಕೆ ಮಾತ್ರ ಸೀಮಿತ. ಮಹಿಳೆಯರು ಮಂತ್ರಿಗಳಾಗಬಾರದು" ಎಂದು ತಾಲಿಬಾನ್ ವಕ್ತಾರ ಸಯ್ಯದ್ ಜೆಕ್ರುಲ್ಲಾ ಹಾಶಮಿ ತಿಳಿಸಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ಮಕ್ಕಳನ್ನು ಹೆರುವುದಕ್ಕೆ ಮಾತ್ರವೇ ಮಹಿಳೆಯರು ಸೀಮಿತ. ಮಹಿಳೆಯರಿಂದ ಆಗದ್ದನ್ನು ಅವರ ಕುತ್ತಿಗೆಗೆ ಹಾಕಲು ಆಗುವುದಿಲ್ಲ" ಎಂದಿದ್ದಾರೆ.
"ಅಫ್ಗಾನಿಸ್ತಾನದಲ್ಲಿ ಪ್ರತಿಭಟನೆ ನಡೆಸುತ್ತಿರುವ ಮಹಿಳೆಯರು ಇಡೀ ದೇಶದ ಎಲ್ಲಾ ಮಹಿಳೆಯರನ್ನು ಪ್ರತಿನಿಧಿಸುವುದಿಲ್ಲ. ಅವರ ಪ್ರತಿಭಟನೆಯನ್ನು ಪರಿಗಣಿಸಿ ಮನ್ನಣೆ ನೀಡಲಾಗುವುದಿಲ್ಲ. ಅಫ್ಗಾನಿಸ್ತಾನದಲ್ಲಿ ಮಹಿಳೆಯರು ಮಕ್ಕಳನ್ನು ಹೆರಬೇಕು. ಬದಲಾಗಿ ಮಂತ್ರಿ ಆಗುವ ಅವಕಾಶ ನೀಡುವುದಿಲ್ಲ" ಎಂದು ಹೇಳಿದ್ದಾರೆ.
1996- 2001ರವರೆಗೆ ಮಹಿಳೆಯರಿಗೆ ತಾಲಿಬಾನ್ ಆಳ್ವಿಕೆಯ ಸಂದರ್ಭ ಕೆಲಸ ಮಾಡಲು ಅವಕಾಶವಿರಲಿಲ್ಲ. ಅಲ್ಲದೇ, ಯುವತಿಯರಿಗೆ ಶಾಲೆಗೆ ಹೋಗಲು ಕೂಡಾ ಅವಕಾಶವಿರಲಿಲ್ಲ. ಇದೀಗ ಹೊಸ ಸರ್ಕಾರದ ಹುಮ್ಮಸ್ಸಿನಲ್ಲಿರುವ ತಾಲಿಬಾನ್ ನಾಯಕರು, ಅನೇಕ ಕಟ್ಟುನಿಟ್ಟಾದ ಜಾನೂನು ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.