ಕಬೂಲ್, ಸೆ 11 (DaijiworldNews/MS): ನಾರ್ದನ್ ಅಲಯನ್ಸ್ ಯೋಧರು ದಿಟ್ಟ ಹೋರಾಟದ ನಡುವೆಯೂ ಪಂಜ್ಶೀರ್ ಪ್ರಾಂತ್ಯದಲ್ಲಿ ತಾಲಿಬಾನ್ ತಾಲಿಬಾನಿಗಳು ಪಂಜ್ಶೀರ್ ನ ಮನೆ ಮನೆಗೆ ನುಗ್ಗಿ ಅಲ್ಲಿನ ಯುವಕರನ್ನು ಬರ್ಬರವಾಗಿ ಹತ್ಯೆ ಮಾಡುತ್ತಿದ್ದಾರೆ.
ಈ ನಡುವೆ ಹಂಗಾಮಿ ಉಪಾಧ್ಯಕ್ಷ, ನಾರ್ದನ್ ಅಲಯನ್ಸ್ ಅನ್ನು ಮುನ್ನಡೆಸುತ್ತಿರುವ ಅಮರುಲ್ಲಾ ಸಲೇಹ್ ಅ ಅವರ ಹಿರಿಯ ಸಹೋದರ ರೋಹುಲ್ಲಾ ಸಲೇಹ್ ಅವರನ್ನು ತಾಲಿಬಾನ್ ಹತ್ಯೆ ಮಾಡಿದೆ. ರೋಹುಲ್ಲಾನನ್ನು ಉಗ್ರಗಾಮಿ ಗುಂಪು ಸೆರೆಹಿಡಿದು ಚಿತ್ರಹಿಂಸೆ ನೀಡಿ ಹತ್ಯೆ ಮಾಡಿರುವುದನ್ನು , ಆವರ ಕುಟುಂಬ ದೃಢಪಡಿಸಿದೆ. ಸದ್ಯ ಅಮರುಲ್ಲಾ ಸಲೇಹ್ ಸದ್ಯ ಪಂಜ್ಶೀರ್ ಅನ್ನು ತೊರೆದಿದ್ದು ಅಜ್ಞಾತವಾಗಿದ್ದಾರೆ.
ತಾಲಿಬಾನ್ ಮಾಹಿತಿ ಸೇವೆಯ ಅಲೆಮರ ಉರ್ದು ಭಾಷಾ ಖಾತೆಯು "ವರದಿಗಳ ಪ್ರಕಾರ" ಪಂಜಶೀರ್ ನಲ್ಲಿ ನಡೆದ ಹೋರಾಟದಲ್ಲಿ ರೋಹುಲ್ಲಾ ಸಲೇಹ್ ಕೊಲ್ಲಲ್ಪಟ್ಟರು.
ಪಂಜ್ಶೀರ್ ನಲ್ಲಿ ಮನೆ ಮನೆಗೆ ನುಗ್ಗುತ್ತಿರುವ ತಾಲಿಬಾನಿಗಳು ಯುವಕರನ್ನು ಬರ್ಬರವಾಗಿ ಹತ್ಯೆ ಮಾಡುತ್ತಾ ಮಾರಣಹೋಮ ಸೃಷ್ಟಿಸುತ್ತಿದ್ದಾರೆ. ತಾಲಿಬಾನಿಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ ಜನರು ಗ್ರಾಮಗಳನ್ನು ತೊರೆಯುತ್ತಿದ್ದಾರೆ.