ಜೆರುಸಲೇಮ್, ಸೆ. 11 (DaijiworldNews/PY): ಶುಕ್ರವಾರ ರಾತ್ರಿ ಹಮಾಸ್ ಉಗ್ರರು ನಡೆಸಿದ ದಾಳಿಗೆ ಪ್ರತಿಯಾಗಿ ಇಸ್ರೇಲ್ ಸೈನ್ಯ ರಾಕೆಟ್ ದಾಳಿ ನಡೆಸಿದೆ.
ಈ ಬಗ್ಗೆ ಟ್ವೀಟ್ ಮೂಲಕ ಮಾಹಿತಿ ನೀಡಿರುವ ಇಸ್ರೇನ್ ಸೇನೆಯ ವಕ್ತಾರರು, "ಗಾಜಾದ ಹಮಾಸ್ ಉಗ್ರತಾಣಗಳ ಮೇಲೆ ನಮ್ಮ ಯುದ್ಧ ವಿಮಾನಗಳು ದಾಳಿ ನಡೆಸಿವೆ" ಎಂದು ತಿಳಿಸಿದ್ದಾರೆ.
ಇಸ್ರೇಲ್ ಜೈಲಿನಿಂದ ತಪ್ಪಿಸಿಕೊಂಡಿದ್ದ ಇಬ್ಬರು ಹಮಾಸ್ ಉಗ್ರರನ್ನು ಪೊಲೀಸರು ಬಂಧಿಸಿದ ಕೆಲವೇ ಗಂಟೆಗಳಲ್ಲಿ ದಾಳಿ ಹಾಗೂ ಪ್ರತಿದಾಳಿ ನಡೆದಿದೆ ಎನ್ನಲಾಗಿದೆ.
ಹಮಾಸ್ ಉಗ್ರರು ಹಾಗೂ ಇಸ್ರೇಲ್ ಮಿಲಿಟರಿ ನಡುವೆ ಮೇ ತಿಂಗಳಿನಲ್ಲಿ 11 ದಿನಗಳ ಕಾಲ ಸಂಘರ್ಷ ನಡೆದಿದ್ದು, ಬಳಿಕ ಕದನ ವಿರಾಮ ಘೋಷಣೆ ಮಾಡಲಾಗಿತ್ತು.