ಮುಂಬೈ, ಸೆ. 11 (DaijiworldNews/PY): ಯನೈಟೆಡ್ ಅರಬ್ ಎಮಿರೇಟ್ಸ್ಗೆ ತೆರಳುವ ಭಾರತೀಯರಿಗೆ ಸೆ.12ರಿಂದ ಅವಕಾಶ ನೀಡಲಾಗಿದೆ.
ಕೊರೊನಾ ಹಿನ್ನೆಲೆ ಯುನೈಟೆಡ್ ಟರಬ್ ಎಮಿರೇಟ್ಸ್ ಸಂಯುಕ್ತ ಅರಬ್ ಸಂಸ್ಥಾನವು ಭಾರತೀಯರ ಮೇಲೆ ವಿಧಿಸಿದ್ದ ನಿರ್ಬಂಧವನ್ನು ತೆಗೆದುಹಾಕಿದ್ದು, ನಾಳೆಯಿಂದ ಪ್ರಯಾಣಿಕರು ಯುಎಇಗೆ ಪ್ರಯಾಣಿಸಬಹುದಾಗಿದೆ. ಆದರೆ, ಕೆಲ ಷರತ್ತುಗಳನ್ನು ಪಾಲಿಸಬೇಕಿದೆ.
ವಿಶ್ವ ಆರೋಗ್ಯ ಸಂಸ್ಥೆ ಅನುಮೋದನೆ ನೀಡಿರುವ ಲಸಿಕೆಯ ಎರಡು ಡೋಸ್ ಪಡೆದ ಭಾರತೀಯರು ಸಂಯುಕ್ತ ಅರಬ್ ಸಂಸ್ಥಾನಕ್ಕೆ ತೆರಳಬಹುದು.
ಭಾರತದೊಂದಿಗೆ ಪಾಕಿಸ್ತಾನ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ವಿಯೆಟ್ನಾಂ, ನಮೀಬಿಯಾ, ಜಾಂಬಿಯಾ, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಉಗಾಂಡ, ಸಿರ್ರಾ ಲಿಯೋನ್, ಲಿಬೇರಿಯಾ, ದಕ್ಷಿಣ ಆಫ್ರಿಕಾ, ನೈಜೀರಿಯಾ ಹಾಗೂ ಅಪ್ಘಾನಿಸ್ತಾದ ಪ್ರಜೆಗಳೂ ಕೂಡಾ ಸೆ.12ರಿಂದ ಯುಎಇಗೆ ಪ್ರಯಾಣ ಬೆಳೆಸಬಹುದಾಗಿದೆ.
ಕಳೆದ ವಾರ, ಸಂಪೂರ್ಣ ಲಸಿಕೆ ಪಡೆದ ಪ್ರಯಾಣಿಕರಿಗೆ ಟೂರಿಸ್ಟ್ ವೀಸಾಗೆ ಅರ್ಜಿ ಸಲ್ಲಿಸಬಹುದು ಎಂದು ಯುಎಇ ತಿಳಿಸಿತ್ತು. ಕೊರೊನಾ ಪ್ರಕರಣಗಳ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆ ಈ ತೀರ್ಮಾನ ಕೈಗೊಂಡಿದೆ.