ಇಸ್ಲಾಮಾಬಾದ್, ಸೆ. 11 (DaijiworldNews/PY): "ಮುಂದಿನ ವಾರ ಪಾಕಿಸ್ತಾನ ಇಂಟರ್ನ್ಯಾಷನಲ್ ಏರ್ಲೈನ್ಸ್ ಇಸ್ಲಾಮಾಬಾದ್ನಿಂದ ಕಾಬೂಲ್ಗೆ ವಿಮಾನಯಾನ ಪುನರಾರಂಭಿಸಲಿದೆ" ಎಂದು ಶನಿವಾರ ಏರ್ಲೈನ್ ವಕ್ತಾರರು ಹೇಳಿದ್ದಾರೆ.
ಕಳೆದ ತಿಂಗಳು ಅಫ್ಗಾನಿಸ್ತಾನದ ಅಧಿಕಾರವನ್ನು ಕಾಬೂಲ್ ವಶಪಡಿಸಿಕೊಂಡ ಬಳಿಕ ಪ್ರಾರಂಭಗೊಂಡ ಮೊದಲ ವಿದೇಶಿ ವಾಣಿಜ್ಯ ಇದಾಗಿದೆ.
ಪಿಐಎ ವಕ್ತಾರ ಅಬ್ದುಲ್ಲಾ ಹಫೀಜ್ ಖಾನ್ ಈ ಬಗ್ಗೆ ಮಾಹಿತಿ ನೀಡಿದ್ದು, "ನಾವು ವಿಮಾನ ಕಾರ್ಯಾಚರಣೆಯ ಸಲುವಾಗಿ ಎಲ್ಲಾ ತಾಂತ್ರಿಕ ಅನುಮತಿ ಪಡೆದುಕೊಂಡಿದ್ದೇವೆ. ಸೆ.13ರಂದು ನಮ್ಮ ಮೊದಲ ವಾಣಿಜ್ಯ ವಿಮಾನ ಏರ್ಬಸ್ A320 ಇಸ್ಲಾಮಾಬಾದ್ನಿಂದ ಕಾಬೂಲ್ಗೆ ಹಾರಲು ತಯಾರಾಗಿದೆ" ಎಂದಿದ್ದಾರೆ.
ತಾಲಿಬಾನ್ ಉಗ್ರರಿಂದಾಗಿ ಪಾಕಿಸ್ತಾನ ಅಫ್ಗಾನಿಸ್ತಾನಕ್ಕೆ ವಿಮಾನ ಸೇವೆಯನ್ನು ಆಗಸ್ಟ್ನಲ್ಲಿ ತಾತ್ಕಾಲಿಕವಾಗಿ ರದ್ದು ಮಾಡಿತ್ತು.