ವಿಶ್ವಸಂಸ್ಥೆ, ಸೆ. 11 (DaijiworldNews/PY): "ಉಗ್ರ ಚಟುವಟಿಕೆಗಳಿಂದ ಸಂತ್ರಸ್ತರಾಗಿರುವ ಎಲ್ಲಾ ರಾಷ್ಟ್ರಗಳಿಗೆ ವಿಶ್ವಸಂಸ್ಥೆ ಬೆಂಬಲವಾಗಿ ನಿಲ್ಲಲಿದೆ" ಎಂದು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.
"2001ರ ಸೆಪ್ಟೆಂಬರ್ 11ರಂದು ಅಮೇರಿಕಾದ ಮೇಲೆ ಉಗ್ರರು ದಾಳಿ ನಡೆಸಿ ಇಂದಿಗೆ 20 ವರ್ಷಗಳಾಗಿವೆ. ಈ ದಾಳಿಯನ್ನು 90 ದೇಶದ 3,000 ಮಂದಿ ಸಾವನ್ನಪ್ಪಿದ್ದು, ಸಾವಿರಾರು ಮಂದಿ ಗಾಯಗೊಂಡಿದ್ದರು. ಈ ಎರಡು ದಶಕಗಳಲ್ಲಿ ಭಯೋತ್ಪಾದನೆ ನಿಗ್ರಹಕ್ಕಾಗಿ ಒಗ್ಗಟ್ಟು ಹಾಗೂ ಏಕತೆ ಪ್ರದರ್ಶಿಸಿದ್ದನ್ನು ನಾವು ಸ್ಮರಿಸುತ್ತೇವೆ" ಎಂದಿದ್ದಾರೆ.
"ನಾವು ಭಯೋತ್ಪಾದನೆ ವಿರುದ್ದದ ಹೋರಾಟಕ್ಕಾಗಿ ಅಮೇರಿಕಾದ ನ್ಯೂಯಾರ್ಕ್ ಹಾಗೂ ವಿಶ್ವದಾದ್ಯಂತ ಉಗ್ರ ಚಟುವಟಿಕೆಗಳಿಂದ ಸಂತ್ರಸ್ತರಾಗಿರುವ ಎಲ್ಲಾ ರಾಷ್ಟ್ರಗಳ ಜೊತೆ ಬೆಂಬಲವಾಗಿ ನಿಲ್ಲುತ್ತೇವೆ" ಎಂದು ಭರವಸೆ ನೀಡಿದ್ದಾರೆ.