ನ್ಯೂಯಾರ್ಕ್, ಸೆ.12 (DaijiworldNews/PY): ಅಫ್ಗಾನಿಸ್ತಾನದಿಂದ ಅಮೇರಿಕಾದ ಸೈನ್ಯವನ್ನು ಹಿಂತೆಗೆತವನ್ನು ಅಮೇರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೀಕಿಸಿದ್ದಾರೆ.
2001ರ ಸೆಪ್ಟೆಂಬರ್ 11ರಂದು ಅಮೇರಿಕಾದ ವಿಶ್ವ ವ್ಯಾಪಾರ ಕೇಂದ್ರದ ಮೇಲೆ ಉಗ್ರರು ನಡೆಸಿದ ದಾಳಿಯನ್ನು ಟ್ರಂಪ್ ನೆನಪಿಸಿಕೊಂಡಿದ್ದಾರೆ. ಅಮೇರಿಕಾ ಅಧ್ಯಕ್ಷ ಜೋ ಬಿಡೆನ್ ಅವರ ವಿರುದ್ದ ವಾಗ್ದಾಳಿ ನಡೆಸಿದ ಅವರು, ಅಫ್ಗಾನ್ನಿಂದ ಅಮೇರಿಕಾ ಸೇನೆಯನ್ನು ವಾಪಾಸ್ಸು ಕರೆಸಿಕೊಂಡಿರುವ ವಿಚಾರವನ್ನು ಟೀಕಿಸಿದ್ದಾರೆ.
ಸೆ.11ರ ದಾಳಿಯನ್ನು ಸ್ಮರಿಸುವ ಭಾಷಣಗಳಲ್ಲಿ ಏಕೆ ಈ ಬಗ್ಗೆ ಉಲ್ಲೇಖಿಸಿಲ್ಲ ಎಂದು ಕೇಳಿದ ಟ್ರಂಪ್, "ಇಂದು ಸಂಪೂರ್ಣವಾಗಿ ಅಸಾಮರ್ಥ್ಯವಾಗಿದೆ" ಎಂದಿದ್ದಾರೆ.
ಅಮೇರಿಕಾದ ಸೇನೆಯನ್ನು ವಾಪಾಸ್ಸು ಕರೆಸಿಕೊಂಡ ಬಳಿಕ ಅಫ್ಗಾನ್ ಸಂಪೂರ್ಣವಾಗಿ ತಾನಿಬಾನ್ಗಳ ವಶವಾಗಿದೆ. ಕಳೆದ ತಿಂಗಳ ಕೊನೆಯಲ್ಲಿ ಅಮೇರಿಕಾ ತೆರವು ಕಾರ್ಯಾಚರಣೆಯಲ್ಲಿ ಪೂರ್ಣಗೊಳಿಸಿತ್ತು.