ಕಾಬೂಲ್, ಸೆ.13 (DaijiworldNews/PY): "ವಿರೋಧಿಗಳ ಸರ್ಕಾರವಿದ್ದರೂ ಕೂಡಾ ದೇಶದಲ್ಲೇ ಅಡಗಿದ್ದೆ" ಎಂದು ತಾಲಿಬಾನ್ ವಕ್ತಾರ ಜಬಿಹುಲ್ಲಾ ಮುಹಾಹಿದ್ ತಿಳಿಸಿದ್ದಾರೆ.
ಕಾಬೂಲ್ ಅನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬಳಿಕ ಇದೇ ಮೊದಲ ಬಾರಿಗೆ ಮಾಧ್ಯಮದ ಮುಂದೆ ಕಾಣಿಸಿಕೊಂಡಿದ್ದಾರೆ. ವರ್ಷಗಳ ಕಾಲ ಮುಜಾಹಿದ್ ನೆರಳಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ತಾನು ವಾಯುವ್ಯ ಪಾಕಿಸ್ತಾನದ ನೌಶೇರಾದಲ್ಲಿರಿವ ಹಕ್ಕಾನಿಯಾ ಸೆಮಿನರಿಯಲ್ಲಿ ಅಧ್ಯಯನ ಮಾಡಿದ್ಧಾರೆ ಒಪ್ಪಿಕೊಂಡಿದ್ದಾರೆ.
"ನಾನು ಅಸ್ತಿತ್ವದಲ್ಲಿ ಇಲ್ಲ ಎಂದು ಅಮೇರಿಕಾ ಹಾಗೂ ಅಫ್ಗಾನಿಸ್ತಾನ ಭಾವಿಸಿತ್ತು" ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
"ನನ್ನನ್ನು ಸೆರೆ ಹೊಡಿಯುವ ಸಲುವಾಗಿ ಅವರು ದಾಳಿ ನಡೆಸಿದ್ದರು, ಆದರೆ, ನಾನು ಅದರಿಂದ ತಪ್ಪಿಸಿಕೊಂಡೆ. ನಾನು ಕಾಬೂಲ್ನಲ್ಲೇ ಉಳಿದುಕೊಂಡೇ ಅಫ್ಗಾನಿಸ್ತಾನವನ್ನು ಮುಕ್ತವಾಗಿ ಚಲಿಸುವಲ್ಲಿ ಸಫಲನಾಗಿದ್ದೇನೆ. ನಾನು ತಾಲಿಬಾನ್ ಚಟುವಟಿಗೆಳ ಪ್ರತೀ ಮಾಹಿತಿಯನ್ನೂ ಪಡೆದುಕೊಳ್ಳುತ್ತಿದ್ದೆ" ಎಂದಿದ್ದಾರೆ.